ಬೇಡಿಕೆ- ಇತ್ತೀಚಿನ ಭಾರೀ ಅಕ್ರಮ ಬೆನ್ನಲ್ಲೇ ಮಾರಾಟ ಬಂದ್- ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಪ್ರತಿಭಟನೆ
ಬೆಂಗಳೂರಿನ ಪರಪ್ಪರ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡುತ್ತಿರುವ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು
ಈ ಬಗ್ಗೆ ಭಾರೀ ಆಕ್ರೋಶ ಬೆನ್ನಲ್ಲೇ ಜೈಲಲ್ಲಿ ಬಿಗಿ ಬಂದೋಬಸ್ತ್. ಜೈಲಿನೊಳಗೆ ಬೀಡಿ, ಸಿಗರೇಟ್ ಮಾರಾಟ ಪೂರ್ಣ ಬಂದ್ಈ ಬಗ್ಗೆ ಕೈದಿಗಳಿಂದ ತೀವ್ರ ಆಕ್ರೋಶ. 3 ದಿನಗಳಿಂದ ತಿಂಡಿ, ಊಟ ಬಿಟ್ಟು ಜೈಲಿನೊಳಗಿನ ಆಡಳಿತ ಕಚೇರಿ ಬಳಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೀಡಿ, ಸಿಗರೇಟ್ ಬಂದ್ ಮಾಡಿರುವುದರಿಂದ ವಿಚಾರಣಾಧೀನ ಹಾಗೂ ಸಜಾಬಂಧಿಗಳು ಕಳೆದ ಮೂರು ದಿನಗಳಿಂದ ಊಟ-ತಿಂಡಿ ಬಿಟ್ಟು ಧರಣಿ ಮಾಡುತ್ತಿದ್ದು, ತಂಬಾಕು ಪದಾರ್ಥಗಳ ಮಾರಾಟಕ್ಕೆ ಅನುಮತಿ ನೀಡುವಂತೆ ಪಟ್ಟುಹಿಡಿದಿದ್ದಾರೆ.
ನಿಷೇಧಿತ ವಸ್ತುಗಳು ಜೈಲಿಗೆ ಪೂರೈಕೆ ಆಗುವುದನ್ನು ನಿಯಂತ್ರಿಸಲು 20 ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ಶೋಧನಾ ತಂಡ ರಚಿಸಲಾಗಿತ್ತು. ಆ ತಂಡ ಇತ್ತೀಚೆಗೆ ತಪಾಸಣೆ ನಡೆಸಿ 50 ಮೊಬೈಲ್‌ಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ, ಸಿಗರೇಟ್ ಪೂರೈಕೆಗೆ ಕಡಿವಾಣ ಹಾಕಿತ್ತು. ಇದರಿಂದ ಅಸಮಾಧಾನಗೊಂಡಿರುವ ಕೈದಿಗಳು ಧರಣಿ ನಡೆಸಿ ಬೀಡಿ, ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.