ಗದ್ದೆಗೆ ಉರುಳಿ ಬಿದ್ದ ಕೆಎಸ್ಆರ್ಟಿಸಿ ಬಸ್: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

KannadaprabhaNewsNetwork |  
Published : Sep 10, 2026, 01:15 AM IST
51 | Kannada Prabha

ಸಾರಾಂಶ

ಸ್ಟೇರಿಂಗ್ ತುಂಡಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ವೊಂದು ಗದ್ದೆಗೆ ಉರುಳಿದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚುಂಚನಕಟ್ಟೆ ಸಮೀಪದ ಹೊಸೂರು ರಸ್ತೆಯಲ್ಲಿ ಬುಧವಾರ ನಡೆದಿದೆ.

ಕನ್ನಡ ಪ್ರಭ ವಾರ್ತೆ ಚುಂಚನಕಟ್ಟೆ

ಸ್ಟೇರಿಂಗ್ ತುಂಡಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ವೊಂದು ಗದ್ದೆಗೆ ಉರುಳಿದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚುಂಚನಕಟ್ಟೆ ಸಮೀಪದ ಹೊಸೂರು ರಸ್ತೆಯಲ್ಲಿ ಬುಧವಾರ ನಡೆದಿದೆ.

ಕೆ.ಆರ್.ನಗರ ಘಟಕಕ್ಕೆ ಸೇರಿದ ಬಸ್ ಬುಧವಾರ ಮಧ್ಯಾಹ್ನ ಕೆ.ಆರ್.ನಗರ ಪಟ್ಟಣದಿಂದ ಹೆಬ್ಬಾಳು, ಶ್ರೀರಾಮಪುರ, ಚುಂಚನಕಟ್ಟೆ ಮಾರ್ಗವಾಗಿ ರಾವಂದೂರು ಗ್ರಾಮಕ್ಕೆ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ.

ಬಸ್ ನಲ್ಲಿ 70ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, ಚುಂಚನಕಟ್ಟೆ ಸಮೀಪ ಬಸ್ ಸ್ಟೇರಿಂಗ್ ತುಂಡಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಗದ್ದೆಯ ಹಳ್ಳಕ್ಕೆ ನುಗ್ಗಿ ಪಲ್ಟಿ ಆಗಿದೆ. ಬಸ್ ಚಾಲಕ ಸೇರಿದಂತೆ ಮುಂದೆ ಕುಳಿತಿದ್ದ ಪ್ರಯಾಣಿಕರು ಒಮ್ಮೆಲೇ ಮುಂದಿನ ಗಾಜಿನ ಸಮೇತ ಹೊರಗೆ ಎಸೆಯಲಾಗಿದ್ದು, ಬಸ್ ನಲ್ಲಿದ್ದ ಸೀಟ್, ಕಂಬಿಗಳು ಮುರಿದಿವೆ. ಒಬ್ಬರಿಗೊಬ್ಬರು ಡಿಕ್ಕಿ ಹೊಡೆದ ಕಾರಣ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ತಲೆ ಭಾಗ, ಕೈ ಕಾಲು ಮತ್ತು ಮುಖಕ್ಕೆ ಪೆಟ್ಟು ಬಿದ್ದಿದೆ. ಹಲವರಿಗೆ ಸಣ್ಣ ಪುಟ್ಟ ಪೆಟ್ಟು ಬಿದ್ದಿದ್ದು, ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ, ಬಸ್ ಚಾಲಕ ಕನಕರಾಜು ಹಾಗೂ ನಿರ್ವಾಹಕ ಸುರೇಶ್ ಅವರಿಗೂ ಪೆಟ್ಟಾಗಿದೆ.

ಪೆಟ್ಟು ಬಿದ್ದಿರುವ ಪ್ರಯಾಣಿಕರನ್ನು ಕೃಷ್ಣರಾಜನಗರ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳೀಯ ಪೊಲೀಸ್ ಅವಿನಾಶ್, ಪ್ರವೀಣ್, ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ಗಾಯಗೊಂಡವರನ್ನು ಆಂಬ್ಯುಲೆನ್ಸ್ಗಳಲ್ಲಿ ಪಟ್ಟಣದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಸ್ಥಳಕ್ಕೆ ಆಗಮಿಸಿದ ಸಾಲಿಗ್ರಾಮ ಪೊಲೀಸ್ ಎಸ್ಐ ಶಶಿಕುಮಾರ್ ಸ್ಥಳ ಮಹಜರು ನಡೆಸಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಶಾಸಕ ಡಿ. ರವಿಶಂಕರ್ ಅವರು ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿ ವೈದ್ಯರಿಗೆ ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬುದ್ಧ, ಬಸವಣ್ಣ- ಅಂಬೇಡ್ಕರ್‌ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ: ವ್ಯಕ್ತಿ ಬಂಧನ
ಕಾರಿಗೆ ಮತ್ತೊಂದು ಕಾರು ಹಿಂಬದಿಯಿಂದ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ