ಬೈಕ್‌ಗೆ ಮಹೇಂದ್ರ ಬುಲೆರೊ ವಾಹನ ಡಿಕ್ಕಿ: ಗ್ರಾಪಂ ಮಾಜಿ ಅಧ್ಯಕ್ಷೆ ಸಾವು

KannadaprabhaNewsNetwork |  
Published : May 21, 2024, 12:46 AM ISTUpdated : May 21, 2024, 04:36 AM IST
20ಕೆಎಂಎನ್ ಡಿ21 | Kannada Prabha

ಸಾರಾಂಶ

ಬೈಕ್‌ಗೆ ಮಹೇಂದ್ರ ಬುಲೆರೊ ವಾಹನ ಡಿಕ್ಕಿಯಾಗಿ ಗ್ರಾಪಂ ಮಾಜಿ ಅಧ್ಯಕ್ಷೆ ಸಾವನ್ನಪ್ಪಿರುವ ಘಟನೆ ಹಲಗೂರಿನ ರಾಷ್ಟ್ರೀಯ ಹೆದ್ದಾರಿ 209 ರ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. 

 ಹಲಗೂರು :  ಬೈಕ್‌ಗೆ ಮಹೇಂದ್ರ ಬುಲೆರೊ ವಾಹನ ಡಿಕ್ಕಿಯಾಗಿ ಗ್ರಾಪಂ ಮಾಜಿ ಅಧ್ಯಕ್ಷೆ ಸಾವನ್ನಪ್ಪಿರುವ ಘಟನೆ ಹಲಗೂರಿನ ರಾಷ್ಟ್ರೀಯ ಹೆದ್ದಾರಿ 209 ರ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮೂಲತಃ ಗೊಲ್ಲರಳ್ಳಿ ವಾಸಿ ಜಗದೀಶ್ ಪತ್ನಿ, ಗ್ರಾಪಂ ಮಾಜಿ ಅಧ್ಯಕ್ಷೆ ಇಂದ್ರಮ್ಮ(30) ಮೃತ ಮಹಿಳೆ. ಇವರ ಪುತ್ರ ರೋಹಿತ್ ಗೌಡ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸೋಮವಾರ ಬೆಳಗ್ಗೆ ತನ್ನ ಮಗನ ಜೊತೆ ಬೈಕ್‌ನಲ್ಲಿ ಹಲಗೂರಿಗೆ ಹೋಗುತ್ತಿದ್ದಾಗ ಬೈಪಾಸ್ ನಲ್ಲಿ ಕನಕಪುರ ಕಡೆಯಿಂದ ಅತಿ ವೇಗವಾಗಿ ಮಳವಳ್ಳಿ ಕಡೆಗೆ ಹೋಗುತ್ತಿದ್ದ ಮಹೇಂದ್ರ ಬುಲೆರೊ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂದ್ರಮ್ಮ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರನ್ನು ಹಲಗೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪುತ್ರ ರೋಹಿತ್ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಸಂಬಂಧ ಸತೀಶ್ ದೂರು ನೀಡಿದ ಅನ್ವಯ ಹಲಗೂರು ಪೊಲೀಸರು ಕೇಸ್ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಖಾಸಗಿ ಬಸ್ ಡಿಕ್ಕಿ: ಪಾದಚಾರಿ ಸಾವು

ಹಲಗೂರು:

ಖಾಸಗಿ ಬಸ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ಬಸವನಪುರ ಗೇಟಿನ ಬಳಿ ನಡೆದಿದೆ. ಸುಬ್ಬೆಗೌಡರ ಪುತ್ರ ರಾಜು (53) ಮೃತಪಟ್ಟವರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಾಜು ಭಾನುವಾರ ರಾತ್ರಿ 7.30ರ ಸಮಯದಲ್ಲಿ ಕೂಲಿ ಕೆಲಸಕ್ಕೆ ಮುಗಿಸಿ ಸ್ವಗ್ರಾಮ ಬಸವನಪುರದ ಬಳಿ ನಡೆದುಕೊಂಡು ಮನೆಗೆ ಹೋಗುತ್ತಿದ್ದರು.

ಕನಕಪುರ ಕಡೆಯಿಂದ ಮಳವಳ್ಳಿ ಕಡೆಗೆ ಅತಿ ವೇಗವಾಗಿ ಹೋಗುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದ ಪರಿಣಾಮ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನ ಪುತ್ರ ಬಿ.ಆರ್.ಮನೋಜ್ ದೂರು ನೀಡಿದ ಅನ್ವಯ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪುಟ್ಟಮ್ಮ ನಿಧನ

ಶ್ರೀರಂಗಪಟ್ಟಣ: ತಾಲೂಕು ನಗುವನಹಳ್ಳಿ ಸ್ವಾತಂತ್ರ್ಯ ಹೋರಾಟಗಾರ ಲೇ.ಚೆನ್ನಯ್ಯರ ಧರ್ಮಪತ್ನಿ ಪುಟ್ಟಮ್ಮ (95) ಅವರು ಸೋಮವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನೆರವೇರಿತು ಎಂದು ಕುಟುಂಬ ವರ್ಗ ತಿಳಿಸಿದೆ.

PREV

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ