ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ । ಪ್ರೊ. ಶ್ವೇತಾ ಕರೆ
ಕನ್ನಡಪ್ರಭ ವಾರ್ತೆ ಚಾಮರಾಜನಗರದೇಶದಲ್ಲಿ ದಕ್ಷ ಆಡಳಿತದ ಪ್ರಜಾ ಸರ್ಕಾರ ರಚಿಸಬೇಕಾದರೆ ವಿದ್ಯಾರ್ಥಿಗಳು ಸಕ್ರಿಯವಾಗಿ ಮತದ ಮೌಲ್ಯ ಅರಿತು ಮತದಾನ ಮಾಡಬೇಕೆಂದು ಯಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಶ್ವೇತಾ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಆಡಳಿತ, ಜಿಲ್ಲಾ ಚುನಾವಣಾ ಸಾಕ್ಷರತಾ ಸಂಘ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ರಾಷ್ಟ್ರೀಯ ಮತದಾರರ ದಿನದ ಆಚರಣೆ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಚಾಮರಾಜನಗರ ಜಿಲ್ಲಾ ಮಟ್ಟದ ಸ್ವೀಪ್ ಸ್ಪರ್ಧೆಗಳು ಹಾಗೂ ಯುವ ಮತದಾರರ ನೋಂದಣಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಯುವ ಮತದಾರರು ಸಾರ್ವಜನಿಕರಲ್ಲಿ, ಸಮುದಾಯಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಯಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಅರ್ಹರೆಲ್ಲರೂ ಮತದಾನಕ್ಕೆ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಪ್ರೊ.ಎಸ್ ಚಂದ್ರಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಶೈಲೇಶ್ ಕುಮಾರ್ ಅವರು, ''''''''ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು'''''''' ಎಂಬ ವಿಚಾರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮತದಾರರ ಸಾಕ್ಷರತಾ ಸಂಘದ ಸಂಚಾಲಕ ಪ್ರೊ. ಗಣೇಶ್ ಪ್ರಕಾಶ್ , ಐಕ್ಯೂಎಸಿ ಸಂಚಾಲಕ ಪ್ರೊ.ಚಿನ್ಮಯ್ ಭಟ್ , ಪ್ರೊ.ಎ.ಎಂ ಶಿವಸ್ವಾಮಿ, ಪ್ರೊ.ನೀಲಕಂಠಸ್ವಾಮಿ, ಆರ್.ಸಿದ್ದರಾಜು ಹಾಗೂ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಜರಿದ್ದರು.ಜಿಲ್ಲಾ ಮಟ್ಟದ ಸ್ವೀಪ್ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿ:
ರಸಪ್ರಶ್ನೆ ಸ್ಪರ್ಧೆ: ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಗಳಾದ ಸಂತೋಷ್ ಸಿ (ಪ್ರಥಮ), ಮಹದೇವ (ದ್ವಿತೀಯ), ಮಹದೇವ ಪ್ರಸಾದ್ ಸಿ (ತೃತೀಯ) ಬಹುಮಾನ ಪಡೆದರು.ಪ್ರಬಂಧ ಸ್ಪರ್ಧೆ (ಕನ್ನಡ ಮಾಧ್ಯಮ): ಯಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ನೀಲಮ್ಮ (ಪ್ರಥಮ), ಕೊಳ್ಳೆಗಾಲದ ಮಹದೇಶ್ವರ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ ರಮ್ಯ ಆರ್ (ದ್ವಿತೀಯ), ಕಬ್ಬಳ್ಳಿ ಸರ್ಕಾರಿ ಪದವಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ರಾಜೇಶ್ವರಿ ಸಿ (ತೃತೀಯ) ಬಹುಮಾನ ಗಳಿಸಿದರು.
ಪ್ರಬಂಧ ಸ್ಪರ್ಧೆ (ಆಂಗ್ಲ ಮಾಧ್ಯಮ): ಕೊಳ್ಳೇಗಾಲ ಮಹದೇಶ್ವರ ಕಾಲೇಜಿನ ದ್ವಿತೀಯ ಬಿ ಎಸ್ ಸಿ ವಿದ್ಯಾರ್ಥಿನಿ ದೀಕ್ಷಿತ ಕೆಆರ್ (ಪ್ರಥಮ), ಗುಂಡ್ಲುಪೇಟೆ ಜೆ.ಎಸ್.ಎಸ್ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಛಾಯಾ (ದ್ವಿತೀಯ), ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ನೇಹಾ ಛಾಯಾ ಎಸ್ಆರ್ (ತೃತೀಯ) ಬಹುಮಾನ ಪಡೆದರು.--------
ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ವೀಪ್ ಸ್ಪರ್ಧೆ ಹಾಗೂ ಯುವ ಮತದಾರರ ನೋಂದಣಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಪ್ರೊ.ಶ್ವೇತಾ ಉದ್ಭಾಟಿಸಿದರು. ಪ್ರೊ.ಶೈಲೇಶ್ ಕುಮಾರ್, ಯಶೋಧಾ, ಪ್ರೊ.ಎಸ್.ಚಂದ್ರಮ್ಮ, ಪ್ರೊ.ನೀಲಕಂಠಸ್ವಾಮಿ, ಪ್ರೊ.ಗಣೇಶ್ ಕುಮಾರ್ ಇದ್ದಾರೆ.---