ಫ್ಲ್ಯಾಟ್ ಹಸ್ತಾಂತರಿಸದ ಮಂತ್ರಿ ಡೆವಲಪರ್ಸ್‌ಗೆ ₹48 ಲಕ್ಷ ದಂಡ

KannadaprabhaNewsNetwork |  
Published : Jul 15, 2024, 01:45 AM ISTUpdated : Jul 15, 2024, 04:58 AM IST
ಮಂತ್ರಿ ಡೆವಲಪರ್ಸ್‌ | Kannada Prabha

ಸಾರಾಂಶ

ಹಣ ಪಡೆದರೂ ಫ್ಲ್ಯಾಟ್‌ ಕೊಡಲು 8 ವರ್ಷ ವಿಳಂಬ ಮಾಡಿದ ಮಂತ್ರಿ ಡೆವಲಪರ್ಸ್‌ಗೆ ಕೆ-ರೇರಾ ದಂಡ ವಿಧಿಸಿದೆ.

 ಬೆಂಗಳೂರು :  ನಿಗದಿತ ಅವಧಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸದೆ ಫ್ಲ್ಯಾಟ್ ಹಸ್ತಾಂತರಿಸಲು ಸುಮಾರು 8 ವರ್ಷ ವಿಳಂಬ ಮಾಡಿದ ಮಂತ್ರಿ ಡೆವಲಪರ್ಸ್‌ಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಪರಿಹಾರವಾಗಿ ಮನೆ ಮಾಲೀಕರಿಗೆ 48.41 ಲಕ್ಷ ರು. ನೀಡಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.

ಶ್ರೇಯಾಂಶು ಪವಸ್ ಎಂಬುವವರು ಹೆಣ್ಣೂರಿನಲ್ಲಿ ನಿರ್ಮಾಣವಾಗುತ್ತಿರುವ ಮಂತ್ರಿ ವೆಬ್‌ಸಿಟಿಯಲ್ಲಿ 2013ರಲ್ಲಿ ₹74.94 ಲಕ್ಷದ ಫ್ಲ್ಯಾಟ್ ಬುಕ್ ಮಾಡಿದ್ದರು. ಹಂತ ಹಂತವಾಗಿ ₹63 ಲಕ್ಷ ಪಾವತಿ ಮಾಡಿದ್ದರು. 2016ಕ್ಕೆ ಯೋಜನೆ ಪೂರ್ಣಗೊಳಿಸಿ ಫ್ಲ್ಯಾಟ್ ಹಸ್ತಾಂತರಿಸುವ ಭರವಸೆಯನ್ನು ಡೆವಲಪರ್‌ ನೀಡಿದ್ದರು. ಆದರೆ, ಹಲವು ವರ್ಷಗಳು ಕಳೆದರೂ ಫ್ಲ್ಯಾಟ್ ಹಸ್ತಾಂತರಿಸದ ಕಾರಣ ಶ್ರೇಯಾಂಶು ಅವರು ಕೆ-ರೆರಾಗೆ ದೂರು ನೀಡಿದ್ದರು.

ನಿಗದಿತ ಅವಧಿಯಲ್ಲಿ ಫ್ಲ್ಯಾಟ್ ಹಸ್ತಾಂತರಿಸದ ಕಾರಣ ತಿಂಗಳಿಗೆ ಸುಮಾರು ₹35 ಸಾವಿರ ಬಾಡಿಗೆ ಲೆಕ್ಕ ಹಾಕಿದರೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ಅನೇಕ ನೆಪಗಳನ್ನು ಹೇಳಿದ ಡೆವಲಪರ್ 8 ವರ್ಷಗಳಿಂದ ಫ್ಲ್ಯಾಟ್ ಹಸ್ತಾಂತರ ಮಾಡಿಲ್ಲ ಎಂದು ಶ್ರೇಯಾಂಶು ವಾದಿಸಿದ್ದರು.

ನೋಟ್ ಬ್ಯಾನ್, ಕಾನೂನು ಹೋರಾಟಗಳು, ಕಚ್ಛಾ ವಸ್ತುಗಳ ಅಲಭ್ಯತೆ, ಕೋವಿಡ್-19, ಕಾರ್ಮಿಕರ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ಡೆವಲಪರ್ ವಾದಿಸಿದ್ದರು. ಎರಡು ಕಡೆಯ ವಾದ ಆಲಿಸಿದ ಪ್ರಾಧಿಕಾರ, ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ ಮನೆ ಖರೀದಿದಾರನಿಗೆ ನಷ್ಟವಾಗಿರುವ ಕಾರಣ ಪರಿಹಾರವಾಗಿ ₹48.41 ಲಕ್ಷ ನೀಡಬೇಕು ಮತ್ತು ಈ ಆದೇಶ ಹೊರಡಿಸಿದ 60 ದಿನಗಳಲ್ಲಿ ಉಳಿದ ಕೆಲಸ ಮುಗಿಸಿ ಫ್ಲ್ಯಾಟ್‌ ಅನ್ನು ಹಸ್ತಾಂತರ ಮಾಡಬೇಕು ಎಂದು ಆದೇಶ ಹೊರಡಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಡ್ರಗ್ಸ್‌ ಕಾರ್‍ಯಾಚರಣೆಯಲ್ಲಿ ರಾಜ್ಯ ಪೊಲೀಸರೂ ಭಾಗಿ: ಡಾ। ಪರಂ
ಚಿನ್ನಾಭರಣಕ್ಕಾಗಿ ಗೃಹಿಣಿ ಕೊಲೆ; ಪೊಲೀಸರ ಶಂಕೆ