ಕೆ.ಆರ್.ಪೇಟೆಯಲ್ಲಿ ಗಾಂಜಾ ಸಾಗಾಟ: ಮೂವರು ಆರೋಪಿಗಳ ಬಂಧನ

KannadaprabhaNewsNetwork |  
Published : Jun 28, 2025, 12:18 AM ISTUpdated : Jun 28, 2025, 06:51 AM IST
27ಕೆಎಂಎನ್ ಡಿ25 | Kannada Prabha

ಸಾರಾಂಶ

ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೆ.ಆರ್.ಪೇಟೆ ತಾಲೂಕಿನ ಚಿಕ್ಕೋನಹಳ್ಳಿ ಕೆ.ಬಿ.ಎಚ್ ಬಡಾವಣೆ ಮುಂಭಾಗದ ಚನ್ನರಾಯಪಟ್ಟಣ ಹಾಗೂ ಮೈಸೂರು ಮುಖ್ಯ ರಸ್ತೆಯಲ್ಲಿ ಅಬಕಾರಿ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

  ಕೆ.ಆರ್.ಪೇಟೆ :  ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತಾಲೂಕಿನ ಚಿಕ್ಕೋನಹಳ್ಳಿ ಕೆ.ಬಿ.ಎಚ್ ಬಡಾವಣೆ ಮುಂಭಾಗದ ಚನ್ನರಾಯಪಟ್ಟಣ ಹಾಗೂ ಮೈಸೂರು ಮುಖ್ಯ ರಸ್ತೆಯಲ್ಲಿ ಅಬಕಾರಿ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ಪಾಂಡವಪುರದ ಉಮ್ರಾಜ್ ಬೇಗ್ ಅಲಿಯಾಸ್ ಮುಜುನು ಬಿನ್ ಸೈಫುಲ್ಲಾ, ಜಬಿವುಲ್ಲಾ ಅಬ್ದುಲ್ ರಹೀಮ್, ಚನ್ನರಾಯಪಟ್ಟಣದ ಸೈಯದ್ ಹುಸೇನ್ ಅಲಿಯಾಸ್ ತೌಫಿಕ್ ಸೈಯದ್ ಆಸೀಫ್ ಉಲ್ಲಾ ಬಂಧಿತ ಆರೋಪಿಗಳು.

ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ್ ಹಡಪದ ಹಾಗೂ ಮಂಡ್ಯ ವಿಭಾಗದ ಅಬಕಾರಿ ಉಪ ಆಯುಕ್ತ ಡಾ.ಆರ್.ನಾಗಶಯನ ಅವರ ನಿರ್ದೇಶನದ ಮೇರೆಗೆ ಪಾಂಡವಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ವಿ.ಬಿ.ರಾಧಾಮಣಿ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ವೈ.ಜೆ.ಪ್ರಫುಲ್ಲಚಂದ್ರ ಹಾಗೂ ಇಲಾಖೆ ಸಿಬ್ಬಂದಿಗಳು ದಾಳಿ ಮಾಡಿ 5 ಕೆ.ಜಿ ಸುಮಾರು 3.5 ಲಕ್ಷ ಬೆಲೆ ಬಾಳುವ ಒಣ ಗಾಂಜಾ ಹಾಗೂ ಗಾಂಜಾ ಸಾಗಾಟ ಮಾಡಲು ಬಳಕೆ ಮಾಡಿದ್ದ ಟಿ.ಎನ್.20. ಬಿ.ಟಿ.9160 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿದ್ಯಾರ್ಥಿನಿ ನಾಪತ್ತೆ, ದೂರು ದಾಖಲು

ಶ್ರೀರಂಗಪಟ್ಟಣ:  ಪ್ಯಾರಾಮೆಡಿಕಲ್ ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿ ಕಾಣೆಯಾಗಿರುವ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಪಿ.ಹೊಸಹಳ್ಳಿ ಗ್ರಾಮ ವಿ.ಹರ್ಷಿತಾ (19) ಕಾಣೆಯಾದ ಯುವತಿ. ಜೂ.16 ರಂದು ಮನೆಯಿಂದ ಹೋದವಳು ಮರಳಿ ಬಂದಿಲ್ಲ ಎಂದು ಆಕೆಯ ತಾಯಿ ಕಲಾವತಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈಕೆ ಬಗ್ಗೆ ಸುಳಿವು ಕಂಡುಬಂದರೆ ಕೂಡಲೆ ಮಂಡ್ಯ ಕಂಟ್ರೋಲ್ ರೂಮ್ ದೂ-0823222488 ಅಥವಾ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ-9480804855 ತಿಳಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ಕಲಹ: ಕೊಲೆ ಅಂತ್ಯ
ಪೊಲೀಸ್‌ ಠಾಣೆ ಸಮೀಪ ಪಾನಮತ್ತ ದಂಪತಿಯ ರಂಪಾಟ