ಕೊಚ್ಚಿ: ಕೇರಳದಲ್ಲಿ ಭಾನುವಾರ ಧಾರ್ಮಿಕ ಸಮಾರಂಭದಲ್ಲಿ ಸರಣಿ ಬಾಂಬ್ ಸ್ಫೋಟಿಸಿದ ಆರೋಪಿ ಡೊಮಿನಿಕ್ ಮಾರ್ಟಿನ್ (48) ತಾನು ಅಂತರ್ಜಾಲದಲ್ಲಿ ಬಾಂಬ್ ಹೇಗೆ ತಯಾರಿಸುವುದು ಎಂಬುದನ್ನು ಕಲಿತಿದ್ದಾಗಿ ಹಾಗೂ ಕೇವಲ 3,000 ರು.ಗಳಲ್ಲಿ ಬಾಂಬ್ ತಯಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಎಲೆಕ್ಟ್ರಿಕ್ ಸರ್ಕ್ಯೂಟ್ ಪರಿಣಿತನಾಗಿದ್ದ ಮಾರ್ಟಿನ್ ಐಇಡಿಗಳನ್ನು ಪಟಾಕಿಯಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಫೋಟಕಗಳಿಂದ ಬಾಂಬ್ ತಯಾರಿಸಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.