ಮಹಿಳೆಯ ಮೇಲೆ ಮೌಲ್ವಿ ಲೈಂಗಿಕ ದೌರ್ಜನ್ಯ : ಕೇಸ್‌

Published : Jul 11, 2025, 10:10 AM IST
court

ಸಾರಾಂಶ

ಕುಟುಂಬದ ಸಮಸ್ಯೆಯನ್ನು ಹೇಳಿಕೊಂಡು ಪರಿಹರಿಸಿಕೊಳ್ಳಲು ಬಂದ ಮಹಿಳೆ ಮೇಲೆ ಮೌಲ್ವಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ದಾಬಸ್‍ಪೇಟೆ: ಕುಟುಂಬದ ಸಮಸ್ಯೆಯನ್ನು ಹೇಳಿಕೊಂಡು ಪರಿಹರಿಸಿಕೊಳ್ಳಲು ಬಂದ ಮಹಿಳೆ ಮೇಲೆ ಮೌಲ್ವಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ತುಮಕೂರು ಮೂಲದ ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಸೋಂಪುರ ಹೋಬಳಿಯ ಕೂತಘಟ್ಟ ಗ್ರಾಮದ ಭದ್ರೆ ಅಲಂ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪಿ.

ಜೂ.30ರಂದು ಸಂಜೆ 7 ಗಂಟೆಯಲ್ಲಿ ತುಮಕೂರು ಮೂಲದ ಮಹಿಳೆ ತನ್ನ ಪತಿಯ ಜೊತೆ ಕೂತಗಟ್ಟದಲ್ಲಿರುವ ಭದ್ರೆ ಅಲಂ ಅವರು ಯಂತ್ರಶಾಸ್ತ್ರ ಮಾಡುತ್ತಾರೆಂದು ಬಂದು ಸಂಸಾರದ ತೊಂದರೆ ಹೇಳಿ ಕಟ್ಟಲೇ (ಯಂತ್ರದಾರ) ಮಾಡಿಕೊಡುವಂತೆ ಕೇಳಿದ್ದಾರೆ. ಆಗ ಭದ್ರೆ ಅಲಂ ಮಹಿಳೆಯನ್ನು ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. 

ನಂತರ ಈ ವಿಷಯ ಆಕೆ ಪತಿ ಬಳಿ ಹೇಳಿದಾಗ ಊರಿನವರು ಆತನಿಗೆ ಶಿಕ್ಷೆ ನೀಡುತ್ತೇವೆಂದು ಒಪ್ಪಿದ್ದು, ಘಟನೆ ನಡೆದು ಸುಮಾರು ದಿನಗಳು ಕಳೆದರೂ ಯಾವುದೇ ಕ್ರಮ ವಹಿಸದ ಕಾರಣ ಮಹಿಳೆ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

PREV
Read more Articles on

Recommended Stories

ವಾಸಂತಿ ಸತ್ತಿಲ್ಲ, ಬದುಕಿದ್ದಾರೆ - ಸುಜಾತ : ಎಸ್‌ಐಟಿ ಅಧಿಕಾರಿಗಳನ್ನೇ ಪ್ರಶ್ನಿಸಿದ ವೃದ್ಧೆ
ಅಪ್ರಾಪ್ತ ಮಗಳನ್ನೇ ರೇ* ಮಾಡಿ ಗರ್ಭಿಣಿಯಾಗಿಸಿದ!