‘ನನ್ನ ಮೇಲೆ ವಿಕಾಸಸೌಧದ ಚೇಂಬರ್ ಹಾಗೂ ಸರ್ಕಾರಿ ಕಾರಿನಲ್ಲಿ ಮುನಿರತ್ನ ರೇಪ್‌ : ಸಂತ್ರಸ್ತೆ

KannadaprabhaNewsNetwork |  
Published : Sep 27, 2024, 01:17 AM ISTUpdated : Sep 27, 2024, 04:35 AM IST
Muniratna

ಸಾರಾಂಶ

ನನ್ನ ಮೇಲೆ ವಿಕಾಸಸೌಧದ ಚೇಂಬರ್  ಹಾಗೂ ಸರ್ಕಾರಿ ಕಾರಿನಲ್ಲಿ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ನಡೆಸಿದ್ದಾರೆ’ ಎಂದು ನ್ಯಾಯಾಲಯದಲ್ಲಿ ಬಿಜೆಪಿ ಕಾರ್ಯಕರ್ತೆಯೂ ಆಗಿರುವ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ.

  ಬೆಂಗಳೂರು : ‘ನನ್ನ ಮೇಲೆ ವಿಕಾಸಸೌಧದ ಚೇಂಬರ್ (ತೋಟಗಾರಿಗೆ ಇಲಾಖೆ ಸಚಿವರಾಗಿದ್ದಾಗ ನೀಡಿದ್ದ ಕಚೇರಿ) ಹಾಗೂ ಸರ್ಕಾರಿ ಕಾರಿನಲ್ಲಿ ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ನಡೆಸಿದ್ದಾರೆ’ ಎಂದು ನ್ಯಾಯಾಲಯದಲ್ಲಿ ಬಿಜೆಪಿ ಕಾರ್ಯಕರ್ತೆಯೂ ಆಗಿರುವ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ.

ಅಲ್ಲದೆ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್‌ ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋ ಮತ್ತು ಪೋಟೋಗಳನ್ನು ನನ್ನಿಂದ ಸಂಗ್ರಹಿಸಿ ಮುನಿರತ್ನ ಬ್ಲ್ಯಾಕ್‌ ಮೇಲ್ ಮಾಡಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ.

ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ನೆಲಮಂಗಲ ತಾಲೂಕಿನ 1ನೇ ಅಪರ ಸಿವಿಲ್‌ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಸಿಆರ್‌ಪಿಸಿ 164ರಡಿ ಸಂತ್ರಸ್ತೆ ಮೂರು ಪುಟಗಳ ಹೇಳಿಕೆ ದಾಖಲಿಸಿದ್ದು, ಈ ಹೇಳಿಕೆಯ ಪ್ರತಿ ಗುರುವಾರ ಬಹಿರಂಗವಾಗಿ ತೀವ್ರ ಸಂಚಲನ ಮೂಡಿಸಿದೆ. ರಾಜ್ಯದ ಆಡಳಿತದ ಶಕ್ತಿ ಸೌಧವಾಗಿರುವ ವಿಕಾಸಸೌಧದಲ್ಲೇ ಅತ್ಯಾಚಾರದಂತಹ ಹೀನ ಕೃತ್ಯ ನಡೆದಿರುವ ಕುರಿತ ಆರೋಪ ವಿವಾದವೆಬ್ಬಿಸಿದೆ.

ಸಂತ್ರಸ್ತೆ ಹೇಳಿಕೆ ಪೂರ್ಣ ವಿವರ ಹೀಗಿದೆ:

ಕೋವಿಡ್ ಸಮಯದಲ್ಲಿ ನಾನು ಕಾರ್ಪೋರೇಟರ್‌ ಮಮತಾ ವಾಸುದೇವ್‌ ಅವರಿಗೆ 5000 ಮಾಸ್ಕ್‌ ಹಂಚಲು ನೀಡಿದ್ದೆ. ಈ ವಿಚಾರ ತಿಳಿದ ಮುನಿರತ್ನ ನನ್ನನ್ನು ಕರೆಸಿ ಪರಿಚಯ ಮಾಡಿಕೊಂಡಿದ್ದರು. ಆನಂತರ ಪ್ರತಿ ದಿನ ನನಗೆ ವಾಟ್ಸ್‌ಆ್ಯಪ್‌ ಆಡಿಯೋ ಹಾಗೂ ವಿಡಿಯೋ ಕಾಲ್‌ ಮಾಡುತ್ತಿದ್ದರು. ಒಂದು ಬಾರಿ ನಾನು ಸ್ನಾನ ಮಾಡುವಾಗ ವಿಡಿಯೋ ಕಾಲ್ ಮಾಡಿದ್ದರು, ನಾನು ರಿಸೀವ್ ಮಾಡದೆ ಇದ್ದ ಕಾರಣ ನನ್ನನ್ನು ಗೋಡೌನ್‌ಗೆ ಬರುವಂತೆ ಕರೆದರು.

ನಾನು 2020ನೇ ಏಪ್ರಿಲ್‌ನಲ್ಲಿ ಅವರ ಗೋಡೌನ್‌ಗೆ ಹೋದಾದ ನನ್ನ ಜುಟ್ಟು ಎಳೆದು ಬೆದರಿಸಿ ಅತ್ಯಾಚಾರ ಮಾಡಿದರು. ಇದಾದ 2 ದಿನ ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ ವಿಡಿಯೋವನ್ನು ಕಳುಹಿಸಿ ಶಾಸಕರು ಬ್ಲ್ಯಾಕ್ ಮೇಲ್‌ ಮಾಡಿದರು. ಕಾರ್ಪೋರೇಟರ್‌ ಮಮತಾರವರ ಪತಿ ವಾಸುದೇವ್‌ರವರು ಬೇರೆ ಹೆಣ್ಣಿನ ಜತೆ ಇರುವ ಅಶ್ಲೀಲ ವಿಡಿಯೋ ಅವರಿಗೆ (ಶಾಸಕರು) ಮಾಡಿಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡಿದರು. ಆ ವಿಡಿಯೋ ಮಾಡಲು ನನ್ನೊಂದಿಗೆ ರಾಧಾ ಹೆಸರಿನ ಎಚ್‌ಐವಿ ಸೋಂಕಿತೆಯನ್ನು ವಾಸುದೇವ್‌ ಜೊತೆ ಖಾಸಗಿ ಕ್ಷಣ ಕಳೆಯಲು ಕಳುಹಿಸಿದ್ದರು. ಈ ಕೃತ್ಯದ ಚಿತ್ರೀಕರಣಕ್ಕೆ ಮೊಬೈಲ್ ಕ್ಯಾಮೆರಾಗಳನ್ನು ರಾಧಾ ಹಾಗೂ ನನ್ನಿಂದ ಫಿಕ್ಸ್ ಮಾಡಿಸಿದ್ದರು. ಬಳಿಕ ಈ ವಿಡಿಯೋವನ್ನು ಶಾಸಕರ ಸೋದರ ಸುಧಾಕರ್‌ರವರಿಗೆ ಕಳುಹಿಸಲಾಯಿತು ಎಂದು ಸಂತ್ರಸ್ತೆ ವಿವರಿಸಿದ್ದಾಳೆ.

ಆದರೆ ಆ ವಿಡಿಯೋದಲ್ಲಿ ಸರಿಯಾಗಿ ಮುಖ ಕಾಣುತ್ತಿಲ್ಲ ಎಂದು ಹೇಳಿದ ಶಾಸಕರು, ವಾಸುದೇವ್ ಜತೆ ಕಾಲ ಕಳೆಯಲು ಮತ್ತೊಂದು ಬಾರಿ ಮೂರು ಜನ ಹೆಣ್ಣು ಮಕ್ಕಳಿಗೆ ಹಿಡನ್‌ ಕ್ಯಾಮೆರಾಗಳನ್ನು ಸುಧಾಕರ್‌ ಮೂಲಕ ಫಿಕ್ಸ್ ಮಾಡಿ ಕಳುಹಿಸಿದ್ದರು. ಆನಂತರ ಅದೇ ರೀತಿಯಲ್ಲಿ ನನಗೆ ಮತ್ತೊಂದು ಬಾರಿ ಬ್ಲ್ಯಾಕ್‌ಮೇಲ್ ಮಾಡಿ, ಒಂದು ಬ್ಯಾಗಿನಲ್ಲಿ ಮೊಬೈಲ್ ಕ್ಯಾಮೆರಾ ಫಿಕ್ಸ್ ಮಾಡಿ ನನ್ನನ್ನು ಗಂಗಣ್ಣನವರ (ಸ್ಥಳೀಯ ರಾಜಕೀಯ ಮುಖಂಡ) ಜೊತೆ ಮಲಗಲು ಬಲವಂತ ಮಾಡಿದ್ದರು. ನನ್ನ ಹಾಗೂ ಗಂಗಣ್ಣರವರ ದೈಹಿಕ ಸಂಬಂಧದ ವಿಡಿಯೋವನ್ನು ಸುಧಾಕರ್‌ರವರು ತೆಗೆದುಕೊಂಡಿದ್ದರು.

ಐಎಎಸ್ ಪತಿ ಪಾರು ಮಾಡಲು ವಿದ್ಯಾ ಬಲಿ:

2021ರ ಜುಲೈನಲ್ಲಿ ಮುನಿರತ್ನರವರು ತನ್ನ ಸಹೋದರಿಯ (ಐಎಎಸ್‌ ಅಧಿಕಾರಿ) ಪತಿಯನ್ನು ವಿದ್ಯಾ ಹಿರೇಮಠ್‌ ಎಂಬ ಮಹಿಳೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ನನಗೆ ತಿಳಿಸಿದರು. ಆ ಮಹಿಳೆಗೆ ಒಂದು ಗತಿ ಕಾಣಿಸಲು ಸಹಕರಿಸುವಂತೆ ನನ್ನನ್ನು ಶಾಸಕರು ಬ್ಲ್ಯಾಕ್‌ಮೇಲ್ ಮಾಡಿದರು. ಅದರಂತೆ ನನ್ನನ್ನು, ಲಕ್ಷ್ಮೀ, ಕಿರಣ್ ಕುಮಾರ್, ಲೋಹಿತ್‌ಗೌಡ, ಮಂಜುನಾಥರವರನ್ನು ವಿದ್ಯಾರವರಿಗೆ ಬರ್ತ್‌ ಡೇ ಪಾರ್ಟಿಯಲ್ಲಿ ಪರಿಚಯ ಮಾಡಿಸಿದರು. ಆಗ ನಮ್ಮನ್ನು ಗುಹಾಂತರ ರೆಸಾರ್ಟ್‌ಗೆ ಹೋಗುವಂತೆ ಹೇಳಿದ ಶಾಸಕರು, ಅಲ್ಲಿ ವಿದ್ಯಾಳ ಅಶ್ಲೀಲ ವಿಡಿಯೋ ಚಿತ್ರೀಕರಿಸುವಂತೆ ಸೂಚಿಸಿದ್ದರು.

ಗೌಡತಿ ಎಂದು ಅತ್ಯಾಚಾರ:

ನಾನು ಗೌಡರ ಜಾತಿಗೆ ಸೇರಿದವಳು. ತಮಗೆ (ಶಾಸಕರು) ಗೌಡರ ಮೇಲೆ ಸ್ನೇಹ ಇದೆ ಎಂದು ನನ್ನನ್ನು ಗೌಡತಿ ಎಂದು ಅಡ್ಡ ಹೆಸರಿನಿಂದ ಕರೆದು ಅತ್ಯಾಚಾರ ಎಸಗಿದರು. ಮುನಿರತ್ನರವರ ಇನ್ನೊಬ್ಬ ಗನ್‌ಮ್ಯಾನ್ ಶ್ರೀನಿವಾಸ್‌ ರವರು ಮುನಿರತ್ನ ಹೇಳಿದಂತೆ ನಾನು ಕೇಳದಿದ್ದರೆ ನನ್ನ ಮಗನನ್ನು ಕೊಲೆ ಮಾಡುತ್ತಾರೆ ಎಂದು ಬೆದರಿಸಿದ್ದರು.

ಮಾಗಡಿ ಮಾಜಿ ಶಾಸಕ, ಪೊಲೀಸರ ವಿಡಿಯೋ:

ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್‌ರವರ ಜತೆ ಸಹ ಅಶ್ಲೀಲವಾಗಿ ಮಾತನಾಡಲು ಹೇಳಿದ್ದರು. ಅಲ್ಲದೆ ಅವರ ಅಶ್ಲೀಲ ಚಿತ್ರಗಳನ್ನು ನನ್ನಿಂದ ಪಡೆದಿದ್ದರು. ಇದೇ ರೀತಿ ಮುನಿರತ್ನರವರು ಹಲವು ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ ಮೇಲ್ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.

ಗುರುಕೃಪ ಆಸ್ಪತ್ರೆಯ ಡಾಕ್ಟರ್ ರೋಹಿತ್‌ರವರ ಅಶ್ಲೀಲ ವಿಡಿಯೋ ಬೇಕು ಎಂದು ನನಗೆ ಶಾಸಕರು ಹೇಳಿದ್ದರು. ನನಗೆ ಸಾಕಾಗಿ ನಾನು ನಿರಾಕರಿಸಿದ್ದೆ. ನಾನು ನಿರಾಕರಿಸಿದ ಕಾರಣ ನನ್ನ ವಿಡಿಯೋವನ್ನು ನನ್ನ ಗಂಡ ಹಾಗೂ ಮಕ್ಕಳಿಗೆ ಕಳುಹಿಸಿದರು. ನನ್ನನ್ನು ಸಾಯಿಸುವುದಾಗಿ ಮುನಿರತ್ನ ಬೆದರಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು