4 ವರ್ಷದ ಪ್ರೀತಿ ಕಾಟನ್‌ಪೇಟೆಯ ಲಾಡ್ಜ್‌ನಲ್ಲಿ ದುರಂತ ಅಂತ್ಯ(ಹ್ಯಾಂಗ್‌ಲೈನ್) ---
-ಮಾಲಲ್ಲಿ ಸುತ್ತಾಡಿ ಲಾಡ್ಜ್‌ಗೆ ತೆರಳಿ ಮತ್ತೆ ಗಲಾಟೆ । ಅಂಗಡೀಲಿ ಚಾಕು ತಂದು ಬೆನ್ನಿಗೆ ಇರಿದು ಹತ್ಯೆ ಮಾಡಿದ ಲವ್ವರ್
ಕನ್ನಡಪ್ರಭ ವಾರ್ತೆ ಬೆಂಗಳೂರುಶೀಲ ಶಂಕಿಸಿ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಲಾಡ್ಜ್‌ನಲ್ಲಿ ಹತ್ಯೆ ಮಾಡಿದ ಸಂಬಂಧ ಮೃತಳ ಪ್ರಿಯಕರನನ್ನು ಕಾಟನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಒಂದೇ ಕಾಲೇಜಿನ ವಿದ್ಯಾರ್ಥಿಗಳು
ಕೆಲ ದಿನಗಳಿಂದ ಗಂಗಾ ತನ್ನನ್ನು ನಿರ್ಲಕ್ಷ್ಯಿಸುತ್ತಿದ್ದಾಳೆ ಎಂದು ಗೋಕುಲ್‌ಗೆ ಅಸಮಾಧಾನವಿತ್ತು. ಇದೇ ವಿಷಯವಾಗಿ ಹಲವು ಬಾರಿ ಅವರ ಮಧ್ಯೆ ಜಗಳವಾಗಿದೆ. ಆದರೆ ಆನಂತರ ರಗಳೆ ಮರೆತು ಪ್ರೇಮಿಗಳು ಒಟ್ಟಾಗುತ್ತಿದ್ದರು. ಆದರೆ ಇತ್ತೀಚಿಗೆ ಗಂಗಾಳ ಚಾರಿತ್ರ್ಯದ ಮೇಲೆ ಆತನಿಗೆ ಶಂಕೆ ಮೂಡಿತ್ತು. ತನ್ನನ್ನು ತೊರೆದು ಬೇರೊಬ್ಬನ ಸಖ್ಯವನ್ನು ಗಂಗಾ ಬಯಸಿದ್ದಾಳೆ ಎಂದು ಆತ ಶಂಕಿಸಿದ್ದ. ಅಲ್ಲದೆ ತಾನು ಕರೆ ಮಾಡಿದಾಗ ಆಕೆ ಸರಿಯಾಗಿ ಮಾತನಾಡುವುದಿಲ್ಲ. ತಾನು ಬ್ಯುಸಿ ಇದ್ದೀನಿ ಎಂದು ಹೇಳುತ್ತಾಳೆ. ಆದರೆ ಸದಾ ಕಾಲ ಮೊಬೈಲ್‌ನಲ್ಲಿ ಆಕೆಯ ವ್ಯಸ್ತಳಾಗಿರುತ್ತಾಳೆ ಎಂದು ಗೋಕುಲ್ ಕೋಪ ವ್ಯಕ್ತಡಿಸಿದ್ದ ಎಂದು ತಿಳಿದು ಬಂದಿದೆ.
ನಗರಕ್ಕೆ ಹಲವು ಬಾರಿ ಕೇರಳಂನಿಂದ ಬಂದು ಇಬ್ಬರು ಒಟ್ಟಿಗೆ ಸುತ್ತಾಡಿ ಮರಳುತ್ತಿದ್ದರು. ಅಂತೆಯೇ 3 ದಿನಗಳ ಹಿಂದೆಯೇ ಈ ಪ್ರೇಮಿಗಳು ಬಂದಿದ್ದರು. ಆದರೆ ಕಾಟನ್‌ಪೇಟೆಯ ಲಾಡ್ಜ್‌ಗೆ ಗುರುವಾರ ಬಂದು ರೂಮ್ ಬಾಡಿಗೆ ಪಡೆದು ತಂಗಿದ್ದರು. ನಂತರ ಲೂಲು ಮಾಲ್‌ಗೆ ತೆರಳಿ ಸುತ್ತಾಡಿ ಲಾಡ್ಜ್‌ಗೆ ಮರಳಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ವೈಯಕ್ತಿಕ ಕಾರಣಕ್ಕೆ ಜಗಳ ಶುರುವಾಗಿದೆ. ಆಗ ಲಾಡ್ಜ್‌ನಿಂದ ಹೊರಗೆ ಬಂದು ಸಮೀಪದ ಅಂಗಡಿಯಲ್ಲಿ ಚಾಕು ಖರೀದಿಸಿ ಗೋಕುಲ್ ಮರಳಿದ್ದಾನೆ. ಮತ್ತೆ ಪ್ರಿಯತಮೆ ಜತೆ ಆತ ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆತ, ಗಂಗಾಳ ಬೆನ್ನಿಗೆ ಚಾಕುವಿನಿಂದ ಇರಿದು ಹೊರ ಬಂದಿದ್ದಾನೆ. ಬಳಿಕ ಘಟನೆ ಬಗ್ಗೆ ಲಾಡ್ಜ್ ಸಿಬ್ಬಂದಿ ತಿಳಿಸಿದ್ದಾನೆ. ತಕ್ಷಣ ಆತನನ್ನು ಹಿಡಿದ ಲಾಡ್ಜ್ ಸಿಬ್ಬಂದಿ, ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸುಮ್ಮನೆ ಬೆದರಿಸಲು ಹೋಗಿ
ನನಗೆ ಗಂಗಾಳನನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ. ಆಕೆಯನ್ನು ಬೆದರಿಸಲು ಚಾಕುವಿನಿಂದ ಇರಿದೆ. ಆದರೆ ಅನಾಹುತವಾಯಿತು ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.
ಈ ಘಟನೆ ಸಂಬಂಧ ಮಹಜರ್‌ಗೆ ಕರೆದೊಯ್ದ ವೇಳೆ ಹತ್ಯೆಗೆ ಬಳಸಿದ್ದ ಚಾಕುವಿನಿಂದ ತನ್ನ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಆರೋಪಿ ಯತ್ನಿಸಿದ ಘಟನೆ ಸಹ ನಡೆದಿದೆ. ಆದರೆ ಕೂಡಲೇ ಪೊಲೀಸರು ಜಾಗ್ರತೆ ವಹಿಸಿದ ಕಾರಣ ಆತನ ಜೀವ ಉಳಿದಿದೆ ಎಂದು ಮೂಲಗಳು ಹೇಳಿವೆ.
ಮಾಜಿ ಸೈನಿಕನ ಪುತ್ರ ಈಗ ಕೊಲೆಗಾರಗೋಕುಲ್ ತಂದೆ ಮಾಜಿ ಸೈನಿಕರಾಗಿದ್ದು, ಕೇರಳದ ಅದ್ದೂರ್ ಜಿಲ್ಲೆಯಲ್ಲಿ ತಮ್ಮ ಕುಟುಂಬದ ಜತೆ ಅವರು ನೆಲೆಸಿದ್ದಾರೆ. ಗಂಗಾಳ ತಂದೆ ಮೃತಪಟ್ಟಿದ್ದು, ತಾಯಿ ಆಶ್ರಯದಲ್ಲಿ ಆಕೆ ನರ್ಸಿಂಗ್ ಓದಿ ಬದುಕು ಕಟ್ಟಿಕೊಳ್ಳುತ್ತಿದ್ದಳು. ದುಬೈನಲ್ಲಿ ಮೃತಳ ಸೋದರಿ ಉದ್ಯೋಗದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.