ನಾಗಮಂಗಲ: ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿ ಅಮಾನತು

KannadaprabhaNewsNetwork |  
Published : Oct 02, 2026, 02:00 AM IST
1ಕೆಎಂಎನ್ ಡಿ25 | Kannada Prabha

ಸಾರಾಂಶ

ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿದ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಹಣ್ಣಿನ ರಸಕ್ಕೆ ಅಮಲೇರುವ ಔಷಧ ಮಿಶ್ರಣ ಮಾಡಿ ಕುಡಿಸಿ ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರವೆಸಗಿದ್ದಲ್ಲದೆ ವೀಡಿಯೋ ಮಾಡಿಟ್ಟುಕೊಂಡು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದ.

ನಾಗಮಂಗಲ:

ತಾಲೂಕಿನ ಗೊಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಗುರುವಾರ ಆದೇಶ ಹೊರಡಿಸಿದ್ದಾರೆ.

ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿದ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಹಣ್ಣಿನ ರಸಕ್ಕೆ ಅಮಲೇರುವ ಔಷಧ ಮಿಶ್ರಣ ಮಾಡಿ ಕುಡಿಸಿ ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರವೆಸಗಿದ್ದಲ್ಲದೆ ವೀಡಿಯೋ ಮಾಡಿಟ್ಟುಕೊಂಡು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳೂರು ಠಾಣೆ ಪೊಲೀಸರು ಸೆ.19ರಂದು ಗೊಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಘಟನೆ ಕುರಿತು ತಹಸೀಲ್ದಾರ್ ಹಾಗೂ ನಾಗಮಂಗಲ ವೃತ್ತ ನಿರೀಕ್ಷಕರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನಾಧರಿಸಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಮರಿಸ್ವಾಮಿಗೆ ಈವರೆಗೂ ಜಾಮೀನು ಸಿಗದಿರುವುದನ್ನು ಉಲ್ಲೇಖಿಸಿ ಸೆ.30ರಂದು ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಅಮಾನತ್ತುಗೊಂಡ ಗ್ರಾಮ ಆಡಳಿತಾಧಿಕಾರಿಯನ್ನು ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ವೃತ್ತಕ್ಕೆ ಸ್ಥಳಾಂತರಿಸಿದ್ದು, ಈ ಸಂದರ್ಭ ಸಕ್ಷಮದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲವೆಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.ಅನಾರೋಗ್ಯಕ್ಕೆ ಬೇಸತ್ತು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಮದ್ದೂರು:ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಶಿವಪುರದಲ್ಲಿ ಬುಧವಾರ ಸಂಜೆ ಜರುಗಿದೆ.

ಶಿವಪುರದ ಧ್ವಜ ಸತ್ಯಾಗ್ರಹ ಸೌಧದ ಹಿಂಭಾಗದ ಮನೆಯಲ್ಲಿ ವಾಸಿಸುತ್ತಿದ್ದ ಪ್ರಕಾಶ್ ಮತ್ತು ಸುಮಾ ದಂಪತಿ ಪುತ್ರಿ ಸುಚಿತ್ರ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಮದ್ದೂರಿನ ಲೀಲಾವತಿ ಬಡಾವಣೆಯ ಮರಿಯಪ್ಪ ಕಾನ್ವೆಂಟ್‌ನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಸುಚಿತ್ರ ಬಹಳ ದಿನಗಳಿಂದ ಹೊಟ್ಟೆ ನೋವಿನಿಂದ ನರಲಾಡುತ್ತಿದ್ದಳು. ತಂದೆ ಪ್ರಕಾಶ್ ಗಾರೆ ಕೆಲಸಕ್ಕೆ ಹಾಗೂ ತಾಯಿ ಸುಮಾ ಗಾರ್ಮೆಂಟ್ಸ್ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತನ್ನ ಎರಡು ಕೈಗಳನ್ನು ಚಾಕುವಿನಿಂದ ಗಾಯ ಮಾಡಿಕೊಂಡು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಸುಚಿತ್ರ ನೋವು ತಡೆಯಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಜೈಲಿನಲ್ಲೇ ಜಾಧವ್, ಬಾಯಿ ಬಿಡದ ಮಾಜಿ ಅಧ್ಯಕ್ಷ ಶಿವಕುಮಾರ್..!
ಮಿಮ್ಸ್ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಅಂತಿಮ ನೋಟಿಸ್