;Resize=(412,232))
ಬೆಂಗಳೂರು : ಮದುವೆ ಆಗುವುದಾಗಿ ನಂಬಿಸಿ ಅನ್ಯಧರ್ಮೀಯಳಾದ ತನ್ನ ಕಿರಿಯ ಸಹಪಾಠಿ ಮೇಲೆ ಲೈಂ*ಕವಾಗಿ ಬಳಸಿಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಿ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಮೂಲದ ಅಹಮದ್ ಯಾಸಿನ್ ವಿರುದ್ಧ ಆರೋಪ ಬಂದಿದ್ದು, ಈ ಕೃತ್ಯ ಬೆಳಕಿಗೆ ಬಂದ ನಂತರ ತಪ್ಪಿಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತನ್ನ ಪ್ರಿಯಕರನ ಮೋಸದಿಂದ ಬೇಸತ್ತು ಯುವತಿ ವಿಷ ಸೇವಿಸಿ ಆತ್ಮ*ತ್ಯೆ ಯತ್ನಿಸಿದ್ದಾಗ ಲೈಂ*ಕ ಶೋಷಣೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವನಹಳ್ಳಿ ಸಮೀಪದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಸಂತ್ರಸ್ತೆ ಹಾಗೂ ಎರಡನೇ ವರ್ಷದಲ್ಲಿ ಆರೋಪಿ ಓದುತ್ತಿದ್ದು, ಕೇರಳ ರಾಜ್ಯದವರಾಗಿದ್ದರಿಂದ ಪರಸ್ಪರ ಪರಿಚಯವಾಗಿ ಪ್ರೇಮವಾಗಿದೆ. ಬಳಿಕ ದೇವನಹಳ್ಳಿ ಹತ್ತಿರ ಲಿವಿಂಗ್ ಟುಗೆದರ್‌ನಲ್ಲಿ ಇಬ್ಬರು ನೆಲೆಸಿದ್ದರು. ಆಗ ಮದುವೆ ಆಗುವುದಾಗಿ ನಂಬಿಸಿ ಪ್ರಿಯತಮೆಯನ್ನು ಲೈಂ*ಕವಾಗಿ ಆತ ಶೋಷಣೆ ಮಾಡಿದ್ದಾನೆ. ಎರಡು ಬಾರಿ ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ. ಕೊನೆಗೆ ಧರ್ಮ ಕಾರಣ ಮುಂದಿಟ್ಟು ಆತ ಮದುವೆಗೆ ನಿರಾಕರಿಸಿದ್ದಾನೆ.
ಈ ಮೋಸದಿಂದ ನೊಂದು ವಿಷ ಸೇವಿಸಿ ಸಂತ್ರಸ್ತೆ ಆತ್ಮ*ತ್ಯೆ ಯತ್ನಿಸಿದ್ದಳು. ಆಗ ಚಿಕಿತ್ಸೆಗೆ ಸಹ ಆಕೆಗೆ ಹಣವಿಲ್ಲದೆ ಸಂಕಷ್ಟ ಎದುರಾಗಿದೆ. ತಕ್ಷಣವೇ ಆಕೆಯನ್ನು ರಕ್ಷಿಸಿ ಅದೇ ಕಾಲೇಜಿನ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಸಕಾಲಕ್ಕೆ ನೆರವು ಲಭಿಸಿದ್ದರಿಂದ ಸಂತ್ರಸ್ತೆ ಪ್ರಾಣಪಾಯಿಂದ ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.