ವೈದ್ಯರ ನಿರ್ಲಕ್ಷ್ಯದಿಂದ 1 ವರ್ಷದ ಮಗು 3 ತಿಂಗಳಿಂದ ಕೋಮಾದಲ್ಲಿ: ಆರೋಪ

Published : Nov 01, 2026, 09:31 AM IST
Baby

ಸಾರಾಂಶ

ಕಿವಿ ಗಾಯದಿಂದಾಗಿ ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಗೆ ದಾಖಲಾಗಿದ್ದ ಒಂದು ವರ್ಷದ ಮಗು ವೈದ್ಯರ ನಿರ್ಲಕ್ಷ್ಯದಿಂದ ಕಳೆದ ಮೂರು ತಿಂಗಳಿಂದ ಕೋಮಾದಲ್ಲಿರುವಂತಾಗಿದೆ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು : ಕಿವಿ ಗಾಯದಿಂದಾಗಿ ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಗೆ ದಾಖಲಾಗಿದ್ದ ಒಂದು ವರ್ಷದ ಮಗು ವೈದ್ಯರ ನಿರ್ಲಕ್ಷ್ಯದಿಂದ ಕಳೆದ ಮೂರು ತಿಂಗಳಿಂದ ಕೋಮಾದಲ್ಲಿರುವಂತಾಗಿದೆ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ನಾಗರಬಾವಿಯ ಆಸ್ಪತ್ರೆ ಬಳಿ ಮಗುವಿನ ಕುಟುಂಬಸ್ಥರು ಪ್ರತಿಭಟನೆ

ನಾಗರಬಾವಿಯ ಆಸ್ಪತ್ರೆ ಬಳಿ ಮಗುವಿನ ಕುಟುಂಬಸ್ಥರು ಶುಕ್ರವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದು, ಶನಿವಾರವೂ ಪ್ರತಿಭಟನೆ ಮುಂದುವರಿಸಿದ ಬೆನ್ನಲ್ಲೇ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿದ್ದು, ಪೊಲೀಸರು ಭೇಟಿ ನೀಡಿ ಮನವೊಲಿಸಲು ನಡೆಸಿದ ಯತ್ನ ವಿಫಲವಾಗಿದೆ. ಮಗುವಿಗೆ ಕಿವಿಗೆ ಗಾಯವಾಗಿದ್ದು ಸಣ್ಣ ಶಸ್ತ್ರಚಿಕಿತ್ಸೆಗೆ ದಾಖಲಾಗಿಸಲಾಗಿತ್ತು. ಈ ವೇಳೆ ನೀಡಿದ ಅನಸ್ತೇಶಿಯಾದಿಂದ ಮಗು ಪ್ರಜ್ಞೆ ತಪ್ಪಿ ಕೋಮಾಗೆ ಹೋಗಿದ್ದು, ಇದು ವೈದ್ಯರ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಪೋಷಕರು ಆರೋಪಿಸಿದ್ದರು.

ಆರೋಗ್ಯಾಧಿಕಾರಿಗೆ ದೂರು

ಈ ಸಂಬಂಧ ಪೋಷಕರು ಹಿಂದೆ ಕೆಎಂಸಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾ.ರಘುನಾಥ್ ನೇತೃತ್ವದ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿದೆ. ಭೇಟಿ ವೇಳೆ ಮೇಲ್ನೋಟಕ್ಕೆ ವೈದ್ಯರ ಲೋಪ ಪತ್ತೆಯಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಕೆ ಮಾಡಲಾಗಿದ್ದು, ಆಸ್ಪತ್ರೆಯಲ್ಲೇ ಮಗುವಿಗೆ ಉಚಿತ ಚಿಕಿತ್ಸೆ ನೀಡುವಂತೆ ಡಿಎಚ್‌ಒ ಸೂಚಿಸಿದ್ದಾರೆ.

ಇನ್ನು ಈವರೆಗೆ ಮಗುವಿನ ಸ್ಥಿತಿ ಬಗ್ಗೆ ಆಸ್ಪತ್ರೆಯುವರು ಸೂಕ್ತ ಮಾಹಿತಿ ನೀಡುತ್ತಿಲ್ಲ. ಜತೆಗೆ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮವಾಗಿಲ್ಲ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ನಾಟಕಕಾರ ಅಡ್ಡಂಡ ಕಾರ್ಯಪ್ಪಗೆ ಮಸಿ!
ಯುವಕನನ್ನು ಬೆದರಿಸಿ 20 ಲಕ್ಷ ಮೌಲ್ಯದಚಿನ್ನ ಸುಲಿಗೆಗೈದ ತೃತಿಯಲಿಂಗಿಗಳ ಸೆರೆ