ಕೋರಿಯನ್‌ ಪ್ರೇಮಿ ಮಕ್ಕಳ ಅಪ್ಪಗೆ 3 ಪತ್ನಿ, ಒಬ್ಬಳು ಲಿವ್‌-ಇನ್‌ ಗೆಳತಿ ! ಆಕೆ ನಿಗೂಢ ಸಾವು

KannadaprabhaNewsNetwork |  
Published : Feb 08, 2026, 02:00 AM IST
gaziyabad

ಸಾರಾಂಶ

ಇತ್ತೀಚೆಗೆ ಇಲ್ಲಿ ಕೋರಿಯನ್‌ ಗೇಮ್‌ ಚಟಕ್ಕೆ ಬಿದ್ದು ಆತ್ಮ*ತ್ಯೆ ಮಾಡಿಕೊಂಡ ಮೂವರು ಸಹೋದರಿಯರ (ನಿಶಿಕಾ, ಪ್ರಾಚಿ, ಪಾಖಿ) ಪ್ರಕರಣ ಮತ್ತಷ್ಟು ಮತ್ತಷ್ಟು ಜಟಿಲವಾಗಿದೆ.ಇದುವರೆಗೆ ಅಂದುಕೊಂಡಂತೆ ಬಾಲಕಿಯರ ತಂದೆ ಚೇತನ್‌ಗೆ ಎರಡಲ್ಲ, ಮೂವರು ಪತ್ನಿಯರಿದ್ದಾರೆ.

ಗಾಜಿಯಾಬಾದ್: ಇತ್ತೀಚೆಗೆ ಇಲ್ಲಿ ಕೋರಿಯನ್‌ ಗೇಮ್‌ ಚಟಕ್ಕೆ ಬಿದ್ದು ಆತ್ಮ*ತ್ಯೆ ಮಾಡಿಕೊಂಡ ಮೂವರು ಸಹೋದರಿಯರ (ನಿಶಿಕಾ, ಪ್ರಾಚಿ, ಪಾಖಿ) ಪ್ರಕರಣ ಮತ್ತಷ್ಟು ಮತ್ತಷ್ಟು ಜಟಿಲವಾಗಿದೆ. ಇದುವರೆಗೆ ಅಂದುಕೊಂಡಂತೆ ಬಾಲಕಿಯರ ತಂದೆ ಚೇತನ್‌ಗೆ ಎರಡಲ್ಲ, ಮೂವರು ಪತ್ನಿಯರಿದ್ದಾರೆ. ಮೂವರೂ ಸ್ವಂತ ಸೋದರಿಯರಾದ ಸುಜಾತಾ, ಹೀನಾ ಮತ್ತು ಟೀನಾ ಎಂಬುದು ತನಿಖೆ ವೇಳೆ ಬಯಲಾಗಿದೆ. 

ಯುವತಿ ಜೊತೆ ಲಿವ್‌-ಇನ್‌ ಸಂಬಂಧ-ನಿಗೂಢವಾಗಿ ಸಾವನ್ನಪ್ಪಿದ್ದಳು

ಅಷ್ಟು ಮಾತ್ರವಲ್ಲ ಮದುವೆಗೆ  ಮೊದಲ ಆತ ಇನ್ನೊಬ್ಬ ಯುವತಿ ಜೊತೆ ಲಿವ್‌-ಇನ್‌ ಸಂಬಂಧದಲ್ಲಿದ್ದ. 2015ರಲ್ಲಿ ಆಕೆ ರಾಜೇಂದ್ರ ನಗರ ಕಾಲೋನಿಯ ಮನೆಯ ಮಾಳಿಗೆಯಿಂದ ಜಿಗಿದು ನಿಗೂಢವಾಗಿ ಸಾವನ್ನಪ್ಪಿದ್ದಳು. ಪೊಲೀಸರು ಅದನ್ನು ಆತ್ಮ*ತ್ಯೆ ಎಂದು ಪರಿಗಣಿಸಿ ಪ್ರಕರಣವನ್ನು ಖುಲಾಸೆ ಮಾಡಿದ್ದರು ಎಂಬ ಸಂಗತಿ ಹೊರಬಿದ್ದಿದೆ.

ಮೊಬೈಲ್‌ ಕಸಿದಿದ್ದೇ ಕಾರಣ:

ಬಾಲಕಿಯರು ಕೊರಿಯನ್‌ ಗೇಮ್ ಚಟಕ್ಕೆ ಬಿದ್ದಿದ್ದರು. ಇದನ್ನು ಗಮನಿಸುತ್ತಿದ್ದ ತಂದೆ, ಫೋನ್‌ ಕಿತ್ತಿಟ್ಟುಕೊಂಡಿದ್ದರು. ಇದರಿಂದ ಮೂವರು ಖಿನ್ನತೆಗೆ ಒಳಗಾಗಿದ್ದರು. ದಾಸ್ಯದಿಂದ ಹೊರಬರಲಾಗದೆ ಒಂದು ದಿನ ತಮ್ಮ ತಾಯಿಯ ಫೋನ್‌ ತೆಗೆದುಕೊಂಡು ಅದರಲ್ಲಿ ಗೇಮ್‌ ಆಡಲು ಮುಂದಾಗಿದ್ದರು. ಆದರೆ ಗೇಮ್‌ ಇನ್‌ಸ್ಟಾಲ್‌ ಮಾಡಲಾಗದೆ ಪರದಾಡಿದ್ದರು. ಹೀಗಾಗಿ ಖಿನ್ನತೆಗೆ ಒಳಗಾಗಿ ಆತ್ಮ*ತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ . ಅಲ್ಲದೆ ಆತ್ಮ*ತ್ಯೆ ಮಾಡಿಕೊಂಡಿದ್ದ ಮಕ್ಕಳು, ತಾಯಿಗಿಂತಲೂ ತಂದೆಯೊಂದಿಗೆ ಆಪ್ತತೆ ಹೊಂದಿದ್ದರು. ಹೀಗಾಗಿ ಮರಣಪತ್ರದಲ್ಲಿ ತಮ್ಮ ತಂದೆಯನ್ನು ಉಲ್ಲೇಖಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಗುಬ್ಬಿಯಿಂದ ಬಿಹಾರಕ್ಕೆ ಹೋಗಿ ಕುಟುಂಬವೇ ನಾಮಾವಷೇ‍ಶ : ಹಿಂದಿದೆ ಭಯಾನಕ ವಿಚಾರ
ಸೈಬರ್‌ ವಂಚನೆಗೆ ನಕಲಿ ಬ್ಯಾಂಕ್‌ ಖಾತೆ ಪೂರೈಸುತ್ತಿದ್ದ 13 ಜನ ಸೆರೆ