ಕನ್ನಡಪ್ರಭ ವಾರ್ತೆ ಬೆಂಗಳೂರು
ಹೌದು ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಹಾಗೂ ರಾಜಧಾನಿಯ ರಸ್ತೆಗಳಲ್ಲಿ ಬೈಕ್‌ನಲ್ಲಿ ವ್ಹೀಲಿಂಗ್ ಕಸರತ್ತಿಗೆ ಕಡಿವಾಣ ಹಾಕಲು ಮುಂದಾಗಿರುವ ಸಂಚಾರ ವಿಭಾಗದ ಪೊಲೀಸರು, ಈಗ ಅಪ್ರಾಪ್ತ ಮಕ್ಕಳ ಪೋಷಕರಿಗೆ ಬಿಸಿ ಮುಟ್ಟಿಸಿದ್ದಾರೆ.
ವ್ಹೀಲಿಂಗ್ ಮಾಡಿ ಸಿಕ್ಕಿಬೀಳುವವರಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದಾರೆ. ಹೀಗಾಗಿ ಅಪ್ರಾಪ್ತರಿಗೆ ಬೈಕ್ ಓಡಿಸಲು ನೀಡಿದ ತಪ್ಪಿಗೆ ಅವರ ಪೋಷಕರಿಗೆ ದಂಡ ವಿಧಿಸಿ 10 ರಿಂದ 5 ಲಕ್ಷ ಮೌಲ್ಯದ ಬಾಂಡ್ ಪಡೆಯಲಾಗುತ್ತಿದೆ. ಉತ್ತರ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 16 ಜನರ ಪತ್ತೆ ಹಚ್ಚಿ ಪರಿಶೀಲಿಸಿದಾಗ ಎಲ್ಲರೂ ಅಪ್ರಾಪ್ತರಾಗಿದ್ದರು. ಆಗ ಅವರ ಪಾಲಕರಿಂದ ₹5 ಲಕ್ಷ ವರೆಗಿನ ಬಾಂಡ್ ಓವರ್ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಸವಾರಿ ಮಾಡಲು ನೀಡಿದ ತಪ್ಪಿಗೆ ನ್ಯಾಯಾಲಯದಲ್ಲಿ ಪೋಷಕರು ದಂಡ ಪಾವತಿಸಿದ್ದಾರೆ. ವಾಹನ ಜಪ್ತಿ ಸಹ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ದಂಡ ಪಾವತಿ ವಿವರಪೋಷಕರು-ದಂಡ ಮೊತ್ತನಾಗೇಶ್-₹25,200ಮಂಜುಳಾ-₹25,200ಸೆಲ್ವಂ-₹25,200ರಾಮಪ್ರಸಾದ್-₹25,200ಶಾಂತಾ-₹25,000ತನ್ವೀರ್ ಅಹಮ್ಮದ್-₹26,200