ಮದ್ಯಸೇವಸಿ ಶಾಲಾ ವಾಹನ ಓಡಿಸುತ್ತಿದ್ದ 16 ಚಾಲಕರಿಗೆ ‘ಮತ್ತಿ’ಳಿಸಿ ಪೊಲೀಸರು!

KannadaprabhaNewsNetwork |  
Published : Jan 24, 2024, 02:02 AM IST
ಖಾಸಗಿ ಶಾಲಾ ವಾಹನಗಳ ಪಾನಮತ್ತ ಚಾಲಕರ ವಿರುದ್ಧ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು. | Kannada Prabha

ಸಾರಾಂಶ

ಮದ್ಯಸೇವಸಿ ಶಾಲಾ ವಾಹನ ಓಡಿಸುತ್ತಿದ್ದ 16 ಚಾಲಕರಿಗೆ ‘ಮತ್ತಿ’ಳಿಸಿ ಪೊಲೀಸರು! ಬೆಳ್‌ಬೆಳಗ್ಗೆ ವಿಶೇಷ ಕಾರ್ಯಾಚರಣೆ । 3414 ವಾಹನ ತಪಾಸಣೆ, 16 ಪಾನಮತ್ತರು ಪತ್ತೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ಶಾಲಾ ವಾಹನಗಳ ಪಾನಮತ್ತ ಚಾಲಕರ ವಿರುದ್ಧ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 16 ಚಾಲಕರಿಗೆ ‘ಮತ್ತಿ’ಳಿಸಿದ್ದಾರೆ.

ನಗರದಲ್ಲಿ ಮದ್ಯ ಸೇವಿಸಿ ಕೆಲ ಖಾಸಗಿ ಶಾಲೆಗಳ ಚಾಲಕರು ವಾಹನ ಚಲಾಯಿಸುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ಬಗ್ಗೆ ಬೆಳಗ್ಗೆ 7 ರಿಂದ 9.30 ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ 3414 ವಾಹನಗಳನ್ನು ತಪಾಸಣೆ ನಡೆಸಲಾಯಿತು. ಪರಿಶೀಲನೆ ವೇಳೆ 16 ಮಂದಿ ಪಾನಮತ್ತ ಚಾಲಕರು ಪತ್ತೆಯಾಗಿದ್ದಾರೆ. ಇವರ ವಿರುದ್ದ ಐಪಿಸಿ 279 (ನಿರ್ಲಕ್ಷ್ಯತನದ ಚಾಲನೆ) ಹಾಗೂ 185 ಮೋಟಾರು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಚಾಲಕರ ಚಾಲನಾ ಪರವಾನಿಗೆ ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು
ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!