ಕನ್ನಡಪ್ರಭ ವಾರ್ತೆ ಬೆಂಗಳೂರು
ಆನೇಕಲ್ ತಾಲೂಕಿನ ಸರ್ಜಾಪುರದ ಅಡಿಗಾರನಹಳ್ಳಿ ನಿವಾಸಿ ಫೈರೋಜ್ ಬೇಗ್ ಹಾಗೂ ಅಡಿಗಾರ ಕಲ್ಲಹಳ್ಳಿ ಗ್ರಾಮದ ಸೈಯದ್ ರಿಜ್ವಾನ್ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಕಾರು ಹಾಗೂ ₹1 ಲಕ್ಷ ನಗದು ಸೇರಿದಂತೆ ₹5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ತಲಘಟ್ಟಪುರ ಸಮೀಪದ ಹೊಸಹಳ್ಳಿಯಲ್ಲಿ ರೈತರ ಕೊಟ್ಟಿಗೆ ಮನೆಯಲ್ಲಿ ಕಟ್ಟಿದ್ದ ನಾಲ್ಕು ಹಸುಗಳು ಕಳ್ಳತನವಾಗಿದ್ದವು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಹಸು ಕಳ್ಳರನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕಾರಿನಲ್ಲೇ ಕದ್ದ ಹಸುಗಳ ಸಾಗಾಣಿಕೆ:
ಅಂತೆಯೇ ತಲಘಟ್ಟಪುರ ಸಮೀಪದ ಹೊಸಹಳ್ಳಿಯಲ್ಲಿ ನಾಲ್ಕು ಹಸುಗಳು ಕಳ್ಳತನದ ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಬ್ರಹ್ಮಣ್ಯಪುರ ಹಾಗೂ ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 5 ಹಸುಗಳು ಹಾಗೂ ಕುರಿ ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಟೋ ಚಾಲಕ, ಮಾಂಸದಂಗಡಿ ಕೆಲಸಗಾರ:ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫೈರೋಜ್ ಸುಲಭವಾಗಿ ಹಣ ಸಂಪಾದನೆಗೆ ಹಸು ಕಳ್ಳತನಕ್ಕಿಳಿದಿದ್ದ. ಆಟೋ ಚಾಲಕನಾಗಿದ್ದ ಸೈಯದ್ ಸಹ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.