ದರ್ಶನ್‌ಗೆ 40 ಲಕ್ಷ ನೀಡಿದವರಿಗೆ ಪೊಲೀಸ್‌ ಸಮನ್ಸ್‌

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ ಅವರಿಗೆ 40 ಲಕ್ಷ ರು. ಕೊಟ್ಟಿದ್ದ ಅವರ ಸ್ನೇಹಿತ ಮೋಹನ್ ರಾಜ್‌ಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ ಅವರಿಗೆ 40 ಲಕ್ಷ ರು. ಕೊಟ್ಟಿದ್ದ ಅವರ ಸ್ನೇಹಿತ ಮೋಹನ್ ರಾಜ್‌ಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ದರ್ಶನ್ ಬಂಧನ ಬಳಿಕ ಪೊಲೀಸರ ಸಂಪರ್ಕಕ್ಕೆ ಸಿಗದೆ ಬಿಜೆಪಿ ಮುಖಂಡ ಎನ್ನಲಾದ ಮೋಹನ್‌ ರಾಜ್‌ ಅಜ್ಞಾತವಾಗಿದ್ದಾರೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಾವು ಬಚಾವಾಗಲು ಅಗತ್ಯವಿರುವ ಹಣಕ್ಕಾಗಿ ಮೋಹನ್‌ ರಾಜ್‌ ಅವರಿಂದ 40 ಲಕ್ಷ ರು. ಹಣವನ್ನು ದರ್ಶನ್ ಪಡೆದಿದ್ದರು. ಆನಂತರ ಆ ಹಣವನ್ನು ಅವರ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದರು.

Share this article