ಪ್ರಜ್ವಲ್‌ ರೇವಣ್ಣ ಕೈದಿ ನಂ.5664

Published : Jun 11, 2024, 10:54 AM IST
Prajwal Revanna.jpg

ಸಾರಾಂಶ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹತ್ತು ದಿನಗಳ ಎಸ್‌ಐಟಿ ವಿಚಾರಣೆ ಬಳಿಕ ಸೋಮವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಬೆಂಗಳೂರು :  ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹತ್ತು ದಿನಗಳ ಎಸ್‌ಐಟಿ ವಿಚಾರಣೆ ಬಳಿಕ ಸೋಮವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ತಮ್ಮ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪ್ರಜ್ವಲ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿದರು. ಕೋರ್ಟ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತು. ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 5664 ನೀಡಲಾಗಿದೆ.

ಪ್ರಜ್ವಲ್‌ ಮನೆಗೆ ಬಂದರೂ ತಾಯಿ ಜತೆ ಭೇಟಿ ಇಲ್ಲ

ಬೆಂಗಳೂರಿನ ನಿವಾಸಕ್ಕೆ ಪ್ರಜ್ವಲ್‌ ಅವರನ್ನು ಕರೆದೊಯ್ದು ಎಸ್‌ಐಟಿ ಮಹಜರು ನಡೆಸಿತು. ಈ ವೇಳೆ ತಾಯಿ ಭವಾನಿ ರೇವಣ್ಣ ಮನೆಯಲ್ಲೇ ಇದ್ದರೂ ತಾಯಿ-ಮಗನ ಭೇಟಿ ಆಗಲಿಲ್ಲ

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!