ಅತ್ಯಾಚಾರ ಆರೋಪ: ಗ್ರಾಮ ಲೆಕ್ಕಿಗ ಬಂಧನ

KannadaprabhaNewsNetwork |  
Published : Sep 21, 2026, 01:30 AM IST
ಗ್ರಾಮ ಲೆಕ್ಕಿಗ ಬಂಧನ | Kannada Prabha

ಸಾರಾಂಶ

ಕದಬಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಮರಿಸ್ವಾಮಿ ಬಂಧಿತ ಆರೋಪಿ. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿ ಬಂದಾಗ ಜ್ಯೂಸ್‌ನಲ್ಲಿ ಅಮಲು ಬರುವ ಔಷಧ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರವೆಸಗಿದ್ದಾನೆ. ತಾನು ಎಸಗಿದ ಕೃತ್ಯದ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- ಜಮೀನಿನ ಸಮಸ್ಯೆ ಬಗೆಹರಿಸುವುದಾಗಿ ನಂಬಿಸಿ ಮಹಿಳೆ ಮನವೊಲಿಕೆ

- ಮನೆಗೆ ಕರೆದೊಯ್ದು ಜ್ಯೂಸ್‌ಗೆ ಅಮಲೇರುವ ಔಷಧ ಬೆರೆಸಿ ಅತ್ಯಾಚಾರ

- ಆಗಾಗ್ಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಡ: ಸಂತ್ರಸ್ತೆ ಆರೋಪ ಕನ್ನಡಪ್ರಭ ವಾರ್ತೆ ನಾಗಮಂಗಲ

ಜ್ಯೂಸ್‌ನಲ್ಲಿ ಅಮಲು ಬರುವ ಔಷಧ ನೀಡಿ ಅತ್ಯಾಚಾರವೆಸಗಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಸಂತ್ರಸ್ಥ ಮಹಿಳೆ ನೀಡಿದ ದೂರಿನ ಮೇರೆಗೆ ಗ್ರಾಮ ಲೆಕ್ಕಿಗನನ್ನು ಬೆಳ್ಳೂರು ಪೊಲೀಸರು ಬಂಧಿಸಿದ್ದಾರೆ.

ಕದಬಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಮರಿಸ್ವಾಮಿ ಬಂಧಿತ ಆರೋಪಿ. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿ ಬಂದಾಗ ಜ್ಯೂಸ್‌ನಲ್ಲಿ ಅಮಲು ಬರುವ ಔಷಧ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರವೆಸಗಿದ್ದಾನೆ. ತಾನು ಎಸಗಿದ ಕೃತ್ಯದ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮರಿಸ್ವಾಮಿ ಗೊಂಡೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಣಕನಹಳ್ಳಿ ಗ್ರಾಮದ ಮಹಿಳೆಯೊಬ್ಬಳ ಜೊತೆ ಪರಿಚಯವಾಗಿ ಜಮೀನಿನ ವಿಷಯಕ್ಕೆ ಸಂಬಂದಪಟ್ಟಂತೆ ಈತನ ಬಳಿ ಸಹಾಯ ಕೇಳಿಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಮಹಿಳೆಯನ್ನು ಮರಿಸ್ವಾಮಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮಹಿಳೆಗೆ ಗೊತ್ತಾಗದಂತೆ ಹಣ್ಣಿನ ರಸಕ್ಕೆ ಅಮಲೇರುವ ಔಷಧ ಬೆರೆಸಿ ಕುಡಿಸಿ, ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರವೆಸಗಿದ್ದಷ್ಟೇ ಅಲ್ಲದೇ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದನು. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಆಗಾಗ್ಗೆ ಮಹಿಳೆಯನ್ನು ಒತ್ತಾಯಿಸುತ್ತಿದ್ದನು ಎಂದು ಆರೋಪಿಸಿದ್ದಾರೆ.

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸೆ.೧೬ ರಂದು ಅರಣಿ ಪಂಚಾಯ್ತಿಯಲ್ಲಿ ಎಸ್‌ಐಆರ್‌ನಲ್ಲಿ ನಿರತರಾಗಿದ್ದ ಸಮಯದಲ್ಲಿ ನನ್ನ ಕುತ್ತಿಗೆಯಲ್ಲಿದ್ದ ೪೦ ಗ್ರಾಂ ಚಿನ್ನದ ಸರ ಮತ್ತು ಹೊಂಡಾ ಡಿಯೋ ಬೈಕನ್ನು ಕಿತ್ತುಕೊಂಡು ಹೋಗಿದ್ದಾನೆ. ಸೆ.೧೭ ಮರಿಸ್ವಾಮಿ ಮತ್ತು ಮಂಜುಳ ಸೇರಿ ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ನನಗೆ ಆಗಾಗ್ಗೆ ಕೊಲೆ ಮಾಡುತ್ತೇನೆಂದು ಹೆದರಿಸುತ್ತಿದ್ದು, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾನೆಂದು ಸಂತ್ರಸ್ಥ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧರಿಸಿ ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗ್ರಾಮಲೆಕ್ಕಿಗ ಮರಿಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೂಲತಃ ಮೈಸೂರಿನವನಾದ ಮರಿಸ್ವಾಮಿ ನಿವೃತ್ತ ಸೇನಾನಿ. ಆ ನಂತರದಲ್ಲ ಗ್ರಾಮಲೆಕ್ಕಿಗನಾಗಿ ಕೆಲಸಕ್ಕೆ ಸೇರಿದ್ದನು. ಈತ ಗೊಂಡೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಕದಬಹಳ್ಳಿ ವೃತ್ತದ ಗ್ರಾಮಲೆಕ್ಕಿಗನ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದನು ಎನ್ನಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಹಣಕ್ಕಾಗಿ ಬಿಜೆಪಿ ಮುಖಂಡನ ಪುತ್ರನ ಅಪಹರಿಸಿ ಕಗ್ಗೊಲೆ
ಜೈಲು ಸೇರಿದ ಮೇಲೆ 7 ಕೆ.ಜಿ. ಸಣ್ಣಗಾದ ಪ್ರಜ್ವಲ್‌ ರೇವಣ್ಣ!