ಜೈಲು ವಾಸದ ಪರಿಣಾಮ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾ*ರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ದೇಹದ ತೂಕ ಸುಮಾರು ಏಳು ಕೆ.ಜಿ.ಯಷ್ಟು ಇಳಿಕೆಯಾಗಿದೆ.
ಬೆಂಗಳೂರು : ಜೈಲು ವಾಸದ ಪರಿಣಾಮ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾ*ರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ದೇಹದ ತೂಕ ಸುಮಾರು ಏಳು ಕೆ.ಜಿ.ಯಷ್ಟು ಇಳಿಕೆಯಾಗಿದೆ.
ತೂಕ ಇಳಿಸಿಕೊಂಡಿರುವ ಸಂಗತಿ ಪೊಲೀಸರಿಗೆ ಖುದ್ದು ಹೇಳಿದ ಪ್ರಜ್ವಲ್
ತಾವು ಜೈಲಿನಲ್ಲಿ ತೂಕ ಇಳಿಸಿಕೊಂಡಿರುವ ಸಂಗತಿ ಪೊಲೀಸರಿಗೆ ಖುದ್ದು ಪ್ರಜ್ವಲ್ ಅವರೇ ಹೇಳಿದ್ದಾರೆ. ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣದ ಸಂಬಂಧ ಅವರನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದರು. ಆ ವೇಳೆ ತಮ್ಮ ಜೈಲು ವಾಸದ ಸಂಕಷ್ಟದ ಬಗ್ಗೆ ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನನಗೆ ಜೈಲಿನ ವಾತಾವರಣ ಒಗ್ಗುತ್ತಿಲ್ಲ. ಇತ್ತೀಚೆಗೆ ಸಲ್ಲದ ಆರೋಪ ಮಾಡಿ ಬ್ಯಾರೆಕ್ ಬದಲಾವಣೆ ಮಾಡಿದ ಬಳಿಕ ನನಗೆ ಅಸಹನೀಯವಾಗಿದೆ. ಎರಡೂವರೆ ವರ್ಷಗಳಲ್ಲಿ ಏಳೆಂಟು ಕೆಜಿ ದೇಹ ತೂಕ ಸಹ ಇಳಿದಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಮೊಬೈಲ್ ಸಹ ಬಳಸಿಲ್ಲ ಎಂದು ಮಾಜಿ ಸಂಸದ ಪ್ರಜ್ವಲ್ ಹೇಳಿರುವುದಾಗಿ ಮೂಲಗಳು ಹೇಳಿವೆ.
ಅತ್ಯಾ*ರ ಪ್ರಕರಣದಲ್ಲಿ ಬಂಧನ
ಅತ್ಯಾ*ರ ಪ್ರಕರಣದಲ್ಲಿ ಬಂಧನವಾಗಿ ಜೈಲು ಸೇರಿದ ಅವರಿಗೆ ಬಳಿಕ ಆ ಕೃತ್ಯದಲ್ಲಿ ಶಿಕ್ಷೆ ಸಹ ಆಗಿದೆ. ಅತ್ಯಾ*ರ ಪ್ರಕರಣಗಳಲ್ಲಿ ಜಾಮೀನು ಸಿಗದ ಪರಿಣಾಮ ಅವರು ಹೊರಗೆ ಬರಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಅವರಿಗೆ ಸಜೆಯಾದ ನಂತರ ಮನೆಯೂಟ ಪೂರೈಕೆ ಸಹ ಸ್ತಬ್ಧವಾಗಿದೆ. ಇದರ ಪರಿಣಾಮ ಪ್ರಜ್ವಲ್‌ರ ದೇಹದ ತೂಕದ ಕಡಿಮೆಯಾಗಿದೆ ಎನ್ನಲಾಗಿದೆ.


