ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲ ತಾಲೂಕಿನ ಕೆ.ಹೊಸಳ್ಳಿ ಗ್ರಾಮದವರಾದ ಹಾಲಿ ಮಂಡ್ಯ ತಾಲೂಕಿನ ಸಾತನೂರು ಗ್ರಾಮಲ್ಲಿ ವಾಸವಾಗಿರುವ ಲೇ.ಗಂಗಾಧರ ಅವರ ಪುತ್ರ ಕೆ.ಜೆ.ಸಂಪತ್ ಶಿಕ್ಷೆಗೆ ಒಳಗಾದ ಅಪರಾಧಿ.
ಕಳೆದ 2015 ನವೆಂಬರ್ 6 ರಂದು ಅಪರಾಧಿ ಕೆ.ಜಿ.ಸಂಪತ್ (36) 13 ವರ್ಷದ ಬಾಲಕಿ ಶಾಲೆಗೆ ಹೋಗಿ ವಾಪಸ್ ಮಂಡ್ಯದ ಕಾಳಿಕಾಂಬ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಆರೋಪಿ ಬೈಕ್‌ನಲ್ಲಿ ಬಂದು ತಂಗಿಗೆ ಸೈಕಲ್ ತೆಗೆದುಕೊಂಡಿದ್ದು, ಅದನ್ನು ಮನೆಗೆ ತೆಗೆದುಕೊಂಡು ಹೋಗಲು ಸಹಾಯ ಮಾಡು ಎಂದು ಹೇಳಿ ಬಾಲಕಿ ಸೈಕಲ್‌ಅನ್ನು ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿ ಬಲವಂತದಿಂದ ಕರೆದೊಯ್ದಿದ್ದಾನೆ.ನಂತರ ಮಂಡ್ಯದಿಂದ ಸುಮಾರು 8-10 ಕಿ.ಮೀ. ದೂರದಲ್ಲಿರುವ ಕೆರಗೋಡು ಹೋಬಳಿ ಹಂಪಾಪುರದ ಬಳಿಯ ನೀಲಗಿರಿ ಮರದ ಫಾರೆಸ್ಟ್‌ನ ನಿರ್ಜನ ಪ್ರದೇಶದಲ್ಲಿ ಚಾಕು ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನು.
ಈ ಪ್ರಕರಣ ವಿಚಾರಣೆ ನಡೆಸಿದ ಮಂಡ್ಯ ಅಧಿಕ ಸಷನ್ಸ್ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎಂ.ನಾಗಜ್ಯೋತಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಕೆ.ಜಿ.ಸಂಪತ್ ಗೆ ಕಲಂ 366 ಅಡಿ ಅಪರಾಧಕ್ಕೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 30 ಸಾವಿರ ರು ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಕಲಂ 376(2)(ಐ ) ಅಡಿ ಅಪರಾಧಕ್ಕೆ 12 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40 ಸಾವಿರ ರು ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ಹಾಗೂ ಕಲಂ 506 ಅಡಿ ಅಪರಾಧಕ್ಕೆ ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.