ರೌಡಿ ಹತ್ಯೆ: ಯಾವುದೇ ಕ್ಷಣ ಶಾಸಕ ಬೈರತಿ ಸೆರೆ

KannadaprabhaNewsNetwork |  
Published : Dec 20, 2025, 02:00 AM ISTUpdated : Dec 20, 2025, 05:45 AM IST
Bairati Basavaraju

ಸಾರಾಂಶ

ಬೆಂಗಳೂರಿನ ಭಾರತೀನಗರದ ರೌಡಿ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ, ಕೆ.ಆರ್‌.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.  

 ಬೆಂಗಳೂರು :  ಬೆಂಗಳೂರಿನ ಭಾರತೀನಗರದ ರೌಡಿ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ, ಕೆ.ಆರ್‌.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಹೀಗಾಗಿ ಮಾಜಿ ಸಚಿವ ಬೈರತಿ ಬಸವರಾಜುಗೆ ಬಂಧನ ಭೀತಿ ಎದುರಾಗಿದ್ದು, ಯಾವುದೇ ಕ್ಷಣದಲ್ಲೂ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸುವ ಸಾಧ್ಯತೆಗಳಿವೆ. ಬಂಧನ ಭೀತಿಯಿಂದ ಸದ್ಯ ಶಾಸಕರು ನಾಪತ್ತೆಯಾಗಿದ್ದಾರೆ.

ಸಿಐಡಿ ಎಸ್ಪಿ ವೆಂಕಟೇಶ್‌ ನೇತೃತ್ವದ ತಂಡ ಕಾರ್ಯಾಚರಣೆ

ಇನ್ನು ಜಾಮೀನು ಅರ್ಜಿ ವಜಾಗೊಂಡ ವಿಚಾರ ತಿಳಿದ ಕೂಡಲೇ ಶಾಸಕ ಬೈರತಿ ಬಸವರಾಜು ಅವರ ಪತ್ತೆಗೆ ಸಿಐಡಿ ಎಸ್ಪಿ ವೆಂಕಟೇಶ್‌ ನೇತೃತ್ವದ ತಂಡ ಕಾರ್ಯಾಚರಣೆಗಿಳಿದಿದೆ. ಬೈರತಿಯಲ್ಲಿರುವ ಶಾಸಕರ ಮನೆ ಹಾಗೂ ಅವರ ಸಂಬಂಧಿಕರ ಮನೆಗಳಲ್ಲಿ ಸಿಐಡಿ ಹುಡುಕಾಟ ನಡೆಸಿದೆ. ಅಲ್ಲದೆ, ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಪಾಲ್ಗೊಂಡಿರುವ ಮಾಹಿತಿ ಮೇರೆಗೆ ಬೆಳಗಾವಿ ನಗರದಲ್ಲಿ ಕೂಡ ಶಾಸಕರಿಗೆ ಸಿಐಡಿ ತಂಡ ಹುಡುಕಾಟ ನಡೆಸಿದೆ ಎಂದು ತಿಳಿದು ಬಂದಿದೆ.

ಜು.15 ರಂದು ಹಲಸೂರು ಕೆರೆ ಸಮೀಪ ಭಾರತೀನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದರು. ಈ ಹತ್ಯೆಗೆ ಭೂ ವಿವಾದ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಮೃತನ ತಾಯಿ ನೀಡಿದ ದೂರಿನ ಮೇರೆಗೆ ಭಾರತೀನಗರ ಠಾಣೆಯಲ್ಲಿ ಶಾಸಕ ಬೈರತಿ ಬಸವರಾಜು ಹಾಗೂ ಅವರ ಆಪ್ತ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಪೂರ್ವ ವಿಭಾಗದ ಪೊಲೀಸರು 16 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು. ಆಗ ಹತ್ಯೆ ಬಳಿಕ ಬಂಧನ ಭೀತಿಯಿಂದ ದುಬೈಗೆ ಹಾರಿದ್ದ ಜಗ್ಗ ಮರಳಿದ ಕೂಡಲೇ ಸಿಐಡಿ ಬಂಧಿಸಿತ್ತು. ಪ್ರಕರಣದಲ್ಲಿ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಬೈರತಿ ಬಸವರಾಜು ನ್ಯಾಯಾಲಯದ ಮೊರೆ ಹೋಗಿದ್ದರು.

ಜು.15ರಂದು ಬೆಂಗಳೂರಲ್ಲಿ ದುಷ್ಕರ್ಮಿಗಳು ರೌಡಿ ಬಿಕ್ಲುವನ್ನು ಹಲ್ಲೆ ನಡೆಸಿ ಹತ್ಯೆ 

ಹತ್ಯೆಗೆ ಭೂ ವಿವಾದ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮೃತನ ತಾಯಿ ದೂರುದೂರಿನ ಹಿನ್ನೆಲೆಯಲ್ಲಿ ಶಾಸಕ ಬೈರತಿ ಬಸವರಾಜು ಸೇರಿ ಹಲವರ ಮೇಲೆ ಎಫ್‌ಐಆರ್‌ ದಾಖಲುಸಿಐಡಿಗೆ ತನಿಖೆಗೆ ಸರ್ಕಾರದ ಆದೇಶ. ಪ್ರಕರಣದಲ್ಲಿ 16 ಆರೋಪಿಗಳ ಬಂಧಿಸಿದ್ದ ತನಿಖಾ ಸಂಸ್ಥೆಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಬೈರತಿ ಬಸವರಾಜು. ಶುಕ್ರವಾರ ಅರ್ಜಿ ವಜಾ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ರಾಜ್ಯದಲ್ಲಿ 10 ವರ್ಷದಲ್ಲಿ 2000 ಗರಡಿಮನೆ ಕಣ್ಮರೆ!
ಅಪ್ರಾಪ್ತ ಮಕ್ಕಳಿಗೆ ವಾಹನ ಕೊಟ್ಟರೆ ಕೇಸ್‌ ದಾಖಲು: ಪೋಷಕರಿಗೆ ಎಚ್ಚರಿಕೆ