ಹಲಗೂರು:
ಕಾಡಾನೆಗಳು ಮತ್ತು ಕಾಡು ಪ್ರಾಣಿಗಳು ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಗಳತ್ತ ಬರುವುದನ್ನು ತಡೆಗಟ್ಟಲು ಕಾವೇರಿ ವನ್ಯಜೀವಿ ವಲಯದ ಶಿಂಷಾ ಶಾಖೆಯ ತಾಳವಾಡಿ ಗಸ್ತಿನಲ್ಲಿ ಸೋಲಾರ್ ಟೆಂಟ್ ಕಲ್ ಬೇಲಿ ಅಳವಡಿಸಲಾಗಿತ್ತು. ಸದರಿ ಕನೆಕ್ಷನ್‌ಗೆ 2 ಸೋಲಾರ್ ಬ್ಯಾಟರಿ ಅಳವಡಿಸಲಾಗಿತ್ತು. ಭಾನುವಾರ ತಡರಾತ್ರಿ ಕಳ್ಳರು ಸೋಲಾರ್ ಬ್ಯಾಟರಿಗಳಿದ್ದ ಪೆಟ್ಟಿಗೆಗಳನ್ನು ಒಡೆದು ಕಳವು ಮಾಡಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕ್‌ಗಳ ನಡುವೆ ಅಪಘಾತ: ಓರ್ವ ಸವಾರ ಸಾವು
ಮದ್ದೂರು: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ತಾಲೂಕ ಕಚೇರಿ ಬಳಿ ಸೋಮವಾರ ಮಧ್ಯರಾತ್ರಿ ಜರುಗಿದೆ.ವಿಳ್ಳೇದೆಲೆ ವ್ಯಾಪಾರಿ ಲೇ.ಶಿವ ಅವರ ಪುತ್ರ ನಾಗೇಂದ್ರ (37) ಮೃತಪಟ್ಟವರು. ಪಟ್ಟಣದ ಕೊಲ್ಲಿ ಸರ್ಕಲ್ ಬಳಿ ಕೋಳಿ ಮೊಟ್ಟೆ ಮಾರಿಕೊಂಡು ಜೀವನ ನಡೆಸುತ್ತಿದ್ದ ನಾಗೇಂದ್ರ ರಾತ್ರಿ 12.30 ಸುಮಾರಿಗೆ ವ್ಯಾಪಾರ ಮುಗಿಸಿ ತನ್ನ ಬೈಕ್‌ನಲ್ಲಿ ಟಿ.ಬಿ. ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ತಾಲೂಕ ಕಚೇರಿ ಸಮೀಪದ ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ತಾಲೂಕು ಕಚೇರಿ, ಬೆಳಗೊಳ ನಾಡ ಕಚೇರಿ ಹಾಗೂ ಗ್ರಾಮ ಸಹಾಯಕ ಮನೆ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.
ನಂತರ ಬೆಳಗೊಳ ಗ್ರಾಮದ ಮಜ್ಜಿಗೆಪುರ ರಸ್ತೆಯ ನಾಡ ಕಚೇರಿಗೂ ಭೇಟಿ ನೀಡಿದ ತಂಡ ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ಪರಿಶೀಲಿಸಿ ದೃಢೀಕೃತಿ ಪ್ರತಿ ಪಡೆದು ಉಪತಹಸೀಲ್ದಾರ್ ವರುಣ ಅವರಿಂದ ಮಾಹಿತಿ ಸಂಗ್ರಹಿಸಿದರು.