ಶ್ರೀರಂಗಪಟ್ಟಣ: ಕುಡಿದ ಮತ್ತಿನಲ್ಲಿದ್ದ ಸ್ನೇಹಿತನ ಕೊಲೆ

KannadaprabhaNewsNetwork |  
Published : Dec 25, 2025, 01:30 AM IST
24ಕೆಎಂಎನ್ ಡಿ24 | Kannada Prabha

ಸಾರಾಂಶ

ಬೆಂಗಳೂರಿನಿಂದ ಸ್ನೇಹಿತನನ್ನು ಕರೆಸಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದ ಉತ್ತರ ಕಾವೇರಿಯ ಹಳೆ ರೈಲ್ವೆ ಸೇತುವೆ ಮೇಲೆ ನಡೆದಿದೆ. ಬೆಂಗಳೂರು ಮೂಲದ ಕೃಷ್ಣರ ಪುತ್ರ ಸುರೇಶ್ (26) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಶ್ರೀರಂಗಪಟ್ಟಣ:

ಬೆಂಗಳೂರಿನಿಂದ ಸ್ನೇಹಿತನನ್ನು ಕರೆಸಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಘಟನೆ ಪಟ್ಟಣದ ಉತ್ತರ ಕಾವೇರಿಯ ಹಳೆ ರೈಲ್ವೆ ಸೇತುವೆ ಮೇಲೆ ನಡೆದಿದೆ.

ಬೆಂಗಳೂರು ಮೂಲದ ಕೃಷ್ಣರ ಪುತ್ರ ಸುರೇಶ್ (26) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಮಂಡ್ಯದ ನಿಖಿಲ್ ಎಂಬ ಸ್ನೇಹಿತನೊಂದಿಗೆ ಮಂಗಳವಾರ ಸಂಜೆ ಶ್ರೀರಂಗಪಟ್ಟಣಕ್ಕೆ ಬಂದು ರಾಂಪುರಕ್ಕೆ ಹೋಗುವ ಉತ್ತರ ಕಾವೇರಿ ನದಿಗೆ ಅಡ್ಡಲಾಗಿರುವ ಹಳೇ ರೈಲ್ವೆ ಸೇತುವೆ ಮೇಲೆ ಕುಳಿತು ಮದ್ಯೆ ಸೇವಿಸಿ ಮತ್ತು ಬಂದ ನಂತರ ಸುರೇಶ್ ಗೆ ಸ್ನೇಹಿತ ನಿಖಿಲ್ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಸ್ಥಳದಲ್ಲಿ ಮೃತನ ಮೊಬೈಲ್ ದೊರೆತಿದ್ದು, ಆತನ ಮೊಬೈಲ್ ನಿಂದ ಮೃತ ಸುರೇಶ್ ಅವರ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಸಿ.ಇ.ತಿಮ್ಮಯ್ಯ, ಡಿವೈಎಸ್ಪಿ ಶಾಂತ ಮಲ್ಲಪ್ಪ, ಸಿಪಿಐ ಬಿ.ಜಿ ಕುಮಾರ್ ಸೇರಿದಂತೆ ಇತರೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳರು

ಮಳವಳ್ಳಿ: ಮನೆ ಬಾಗಿಲು ಮುರಿದ ದುಷ್ಕರ್ಮಿಗಳು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ಟಿ.ಎಲ್.ಶಿವಪ್ಪ ಅವರು ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 15 ಗ್ರಾಂ ಚಿನ್ನಾಭರಣ ಸೇರಿದಂತೆ ಬೆಳ್ಳಿ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಬುಧವಾರ ಬೆಳಗಿನ ಜಾವ ಪಕ್ಕದ ಮನೆಯವರು ಕಳ್ಳತನವಾಗಿರುವುದನ್ನು ಗಮನಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಎಸ್.ಬಿ.ಯಶವಂತ ಕುಮಾರ್, ಸಿಪಿಐ ಬವಸರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈಲು ಡಿಕ್ಕಿ ಅಪರಿಚಿತ ವ್ಯಕ್ತಿ ಸಾವು

ಮಂಡ್ಯ: ತಾಲೂಕಿನ ಯಲಿಯೂರು ಮಂಡ್ಯ ರೈಲು ನಿಲ್ದಾಣಗಳ ನಡುವೆ ಕಿ.ಮೀ ನಂಬರ್ 98/300-400 ರಲ್ಲಿ ರೈಲುಗಾಡಿ ಗುದ್ದಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಗೆ ಸುಮಾರು 50-60 ವರ್ಷವಾಗಿದೆ. 5 ಅಡಿ ಎತ್ತರ, ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಬಿಳಿ ಮೀಸೆ ಹೊಂದಿದ್ದು ಮೈ ಮೇಲೆ ತಿಳಿ ನೀಲಿ ಬಣ್ಣದ ಬನಿಯನ್, ಬಿಳಿ ಬಣ್ಣದ ಕಪ್ಪು ಗೆರೆ ಇರುವ ಶರ್ಟ್, ಕಪ್ಪು ಬಣ್ಣದ ಚಡ್ಡಿ, ನೀಲಿ ಬಣ್ಣದ ಟರ್ಕಿ ಟವಲ್, ಕೆಂಪು ಧರಿಸಿರುತ್ತಾರೆ. ವಾರಸುದಾರರಿದಲ್ಲಿ ದೂ.-0821-2516579ಸ ಮೊ-9480802122 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ರೈಲ್ವೆ ಪೊಲೀಸ್ ಠಾಣೆ ಆರಕ್ಷಕ ಉಪನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ
ಖರ್ಚಿಗೆ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ ಪತಿರಾಯ