ಅನಾರೋಗ್ಯದಿಂದ ವಿದ್ಯಾರ್ಥಿನಿ ಸಾವು

KannadaprabhaNewsNetwork | Updated : Apr 16 2024, 05:20 AM IST

ಸಾರಾಂಶ

ಮಂಡ್ಯ ನಗರದ ಕಲ್ಲಹಳ್ಳಿ ವಿ.ವಿ.ನಗರದ ನಿವಾಸಿಗಳಾದ ಅನಿತಾ ಹಾಗೂ ಹೇಮಚಂದ್ರು (ಮಂಜು) ಪುತ್ರಿ ವರ್ಷಾ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದರು. ಇದೀಗ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ

 ಮಂಡ್ಯ : ಅನಾರೋಗ್ಯದಿಂದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ (18) ಮೃತ ವಿದ್ಯಾರ್ಥಿನಿ. ನಗರದ ಕಲ್ಲಹಳ್ಳಿ ವಿ.ವಿ.ನಗರದ ನಿವಾಸಿಗಳಾದ ಅನಿತಾ ಹಾಗೂ ಹೇಮಚಂದ್ರು (ಮಂಜು) ಪುತ್ರಿ ವರ್ಷಾ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದರು. ಇದೇ ತಿಂಗಳ 18ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

ಕಳೆದ ಮೂರ್‍ನಾಲ್ಕು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವರ್ಷಾ ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಅಪೆಂಡಿಸ್ ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು. ಆ ವೇಳೆ ಹೃದಯಾಘಾತ ಸಂಭವಿಸಿ ತೀವ್ರ ಅಸ್ವಸ್ಥಗೊಂಡಿದ್ದರು.

ತಕ್ಷಣ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಹೃದಯ ಸ್ಥಂಭನ ಉಂಟಾಗಿ, ಚಿಕಿತ್ಸೆ ಫಲಿಸಿದೆ ಸೋಮವಾರ ಮುಂಜಾನೆ ಮೃತಪಟ್ಟರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ರಂಗಸ್ವಾಮಿ, ಮಾಂಡವ್ಯ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆ ಕಲ್ಲಹಳ್ಳಿಯ ಸ್ಮಶಾನದಲ್ಲಿ ಸೋಮವಾರ ಸಂಜೆ ಜರುಗಿತು.

ಅಪರಿಚಿತ ಶವ ಪತ್ತೆ

ಮಂಡ್ಯ:ನಗರದ ಕಾರಿಮನೆ ಗೇಟ್ ಬಳಿ ಇರುವ ಆರ್.ಎಂ.ಎಸ್. ಎಂಟರ್ ಪ್ರೈಸಸ್ ನ ಗುಜರಿ ಅಂಗಡಿಯ ಮುಂಭಾಗ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಮೃತ ಗಂಡಸಿಗೆ ಸುಮಾರು 40 ರಿಂದ 42 ವರ್ಷವಾಗಿದೆ. ಸಾಧಾರಣ ಶರೀರ ಮತ್ತು ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮೃತನ ಎದೆ ಮೇಲೆ ಗಾಯಿತ್ರಿ ಎಂಬ ಹೆಸರಿನ ಹಸಿರು ಹಚ್ಚೆ, ಬಲಗೈ ಮುಷ್ಠಿ ಹತ್ತಿರ ಹೃದಯದ ಚಿತ್ರದ ಒಳಗೆ ಓಂ ಎಂಬ ಹಸಿರು ಹಚ್ಚೆ ಇರುತ್ತದೆ. ಶವದ ಮೈಮೇಲೆ ಸಿಮೆಂಟ್ ಬಣ್ಣದ ತುಂಬು ತೋಳಿನ ಟೀಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ. ವಾರಸುದಾರರಿದ್ದಲ್ಲಿ ದೂ-08232-224500/221345 ಹಾಗೂ ದೂ-08232224888 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಸೆಂಟ್ರಲ್ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

Share this article