ಹಲಗೂರು:ಮನೆ ಹಿಂಬಾಗಿಲ ಚಿಲಕ ಮುರಿದು ಒಳ್ಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 5 ಲಕ್ಷ ರು. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಯತ್ತಂಬಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆಆಗಮಿಸಿದ ಎಎಸ್ಪಿ ಗಂಗಾಧರಸ್ವಾಮಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದರು. ಹಲಗೂರು ಪೋಲಿಸ ಠಾಣೆ ಪಿಎಸ್‌ಐ ಮಹೇಂದ್ರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ನೀಲಗಿರಿ, ಅಡಿಕೆ, ತೆಂಗಿನ ತೋಟಕ್ಕೆ ಬೆಂಕಿ: ಲಕ್ಷಾಂತರ ರು. ನಷ್ಟಮಳವಳ್ಳಿ:ನೀಲಗಿರಿ, ಅಡಿಕೆ ಹಾಗೂ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರು. ನಷ್ಟವಾಗಿರುವ ಘಟನೆ ತಾಲೂಕಿನ ಶೆಟ್ಟಹಳ್ಳಿ ಸಮೀಪದ ಬುಧವಾರ ಸಂಜೆ ನಡೆದಿದೆ.ಗ್ರಾಮದ ಯೋಗೇಶ್ ಹಾಗೂ ತಮ್ಮಯ್ಯ ಅವರಿಗೆ ಸೇರಿದ ತಲಾ ಎರಡು ಎಕರೆ, ನಿಂಗಯ್ಯರ ಒಂದೂವರೆ ಎಕರೆ ಹಾಗೂ ಪಾಪಣ್ಣ ಎಂಬ ರೈತನ ಒಂದು ಎಕರೆ ನೀಲಗಿರಿ ತೋಟ ಬೆಂಕಿಗೆ ಸುಟ್ಟು ಹೋಗಿದೆ. ಅಲ್ಲದೇ, ಕರಿಯಪ್ಪ ಹಾಗೂ ಸುರೇಶ್ ಅವರಿಗೆ 15 ಅಡಿಕೆ ಹಾಗೂ 15 ತೆಂಗಿನ ಮರಗಳು ಸಹ ಬೆಂಕಿಗಾಹುತಿಯಾಗಿವೆ.
ಘಟನೆಯಿಂದಾಗಿ ಲಕ್ಷಾಂತರ ರು.ನಷ್ಟವಾಗಿದೆ. ರೈತರಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.