ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೈಸೂರಿನ ಬ್ಯಾಂಕ್‌ ಉದ್ಯೋಗಿ ವಿಮಲ್ ಕಾರು ಸಂಪೂರ್ಣ ಭಸ್ಮ

KannadaprabhaNewsNetwork |  
Published : Dec 24, 2024, 12:49 AM ISTUpdated : Dec 24, 2024, 03:30 AM IST
23ಕೆಎಂಎನ್ ಡಿ11 | Kannada Prabha

ಸಾರಾಂಶ

ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಉಪ್ಪನಹಳ್ಳಿ (ಕನ್ನಹಳ್ಳಿ) ಬಳಿಯ ಮೈಸೂರು - ಮಳವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

 ಮಳವಳ್ಳಿ : ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಉಪ್ಪನಹಳ್ಳಿ (ಕನ್ನಹಳ್ಳಿ) ಬಳಿಯ ಮೈಸೂರು - ಮಳವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೈಸೂರಿನ ಬ್ಯಾಂಕ್‌ ಉದ್ಯೋಗಿ ವಿಮಲ್ ತಮ್ಮ ಕಾರಿನಲ್ಲಿ ಮಳವಳ್ಳಿಯಿಂದ ಮೈಸೂರಿಗೆ ತೆರಳುತ್ತಿದ್ದಾಗ ಉಪ್ಪನಹಳ್ಳಿ (ಕನ್ನಹಳ್ಳಿ) ಬಳಿ ಇದ್ದಕ್ಕಿದ್ದಂತೆ ಕಾರಿನಲ್ಲಿ ವೈರ್‌ಗಳಲ್ಲಿ ಆದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಇದ್ದರಿಂದ ಗಾಬರಿಗೊಂಡ ವಿಮಲ್ ಕಾರಿನಿಂದ ಇಳಿದು ಪಕ್ಕಕ್ಕೆ ಬರುತ್ತಿದ್ದಂತೆಯೇ ಬೆಂಕಿ ವ್ಯಾಪಿಸಿ ಕ್ಷಣಾರ್ಧದಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರೂ ಕಾರು ಸುಟ್ಟು ಬೂದಿಯಾಗಿತ್ತು. ರಾಜ್ಯ ಹೆದ್ದಾರಿಯಲ್ಲಿನ ಘಟನೆಯಿಂದ ವಾಹನ ಸವಾರರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು.

ಇಬ್ಬರು ವಸತಿ ನಿಲಯ ವಿದ್ಯಾರ್ಥಿಗಳು ನಿಗೂಢ ನಾಪತ್ತೆ

ಮದ್ದೂರು: 

ತಾಲೂಕಿನ ಸೋಮನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಇಬ್ಬರು ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ತಾಲೂಕಿನ ಆತಗೂರು ಹೋಬಳಿ ಮಲ್ಲನಕುಪ್ಪೆ ಗ್ರಾಮದ ಲಕ್ಷ್ಮಿ ಮಹೇಶ್‌ಗೌಡ (14), ಶೋಭಾ ಅವರ ಪುತ್ರ ಪ್ರತೀಕ್ (13) ಕಳೆದ ಡಿ.16ರಿಂದ ನಾಪತ್ತೆಯಾಗಿದ್ದಾರೆಂದು ವಿದ್ಯಾರ್ಥಿಗಳ ಪೋಷಕರು ಮದ್ದೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಹೇಶ್‌ಗೌಡ ಸೋಮನಹಳ್ಳಿ ಎಸ್.ಸಿ.ಮಲ್ಲಯ್ಯ ಪ್ರೌಢಶಾಲೆಯಲ್ಲಿ ಮಹೇಶ್‌ಗೌಡ 9ನೇ ತರಗತಿ ಓದುತ್ತಿದ್ದರೆ ಹಾಗೂ ಪ್ರತೀಕ್ 8 ನೇ ತರಗತಿ ಓದುತ್ತಿದ್ದಾರೆ. ಇವರು ಶಾಲೆ ಪಕ್ಕದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಉಳಿದುಕೊಂಡಿದ್ದರು. ಡಿ.14,15 ರಂದು ಶಾಲೆಗೆ ರಜೆ ಇದ್ದ ಕಾರಣ ಇಬ್ಬರು ತನ್ನ ತಾಯಿಯ ಊರದ ಹಾಲಂಶೆಟ್ಟಿಯಲ್ಲಿ ಹೋಗಿದ್ದರು.

ಡಿ.16 ರಂದು ಸಂಬಂಧಿಕರ ಜೊತೆ ಬೈಕ್‌ನಲ್ಲಿ ಸೋಮನಹಳ್ಳಿಗೆ ಬಂದ ನಂತರ ಅಲ್ಲಿಂದ ನಾಪತ್ತೆಯಾಗಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಮಹೇಶ್‌ಗೌಡ ದುಂಡುಮುಖ, ಬಿಳಿ ಮೈಬಣ್ಣ, ಮನೆಯಿಂದ ಹೋಗುವಾಗ ನೀಲಿ ಬಣ್ಣಜರ್ಕೀನ್, ನೀಲಿ ಪ್ಯಾಂಟ್ ಧರಿಸಿದ್ದಾನೆ. ಈತನ ಬಲ ಗೈ ಮೇಲೆ ಮಹೇಶ್ ಎಂಬ ಹಸಿರು ಅಚ್ಚೆ ಗುರುತಿದೆ ಹಾಗೂ ಪ್ರತೀಕ್ ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಮನೆಯಿಂದ ಹೊರಡುವಾರ ಬಿಳಿಬಣ್ಣದ ಷರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿದ್ದಾರೆ. ಎಡಗೈ ಮೇಲೆ ಪಿಎಸ್ ಎಂಬ ಹಸಿರು ಅಚ್ಚೆ ಗುರುತಿದೆ. ಈ ಇಬ್ಬರು ಕನ್ನಡ ಮಾತನಾಡುತ್ತಾರೆ. ಈ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ
20 ವಾಹನಕ್ಕೆ ಗುದ್ದಿಸಿದ ಟ್ರಕ್‌ನ್ನು 12 ಕಿ.ಮೀ. ಚೇಸ್‌ ಮಾಡಿದ ಪೊಲೀಸರು