ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿ ಮನೆ ಸಂಪೂರ್ಣ ಭಸ್ಮ

KannadaprabhaNewsNetwork |  
Published : Jun 02, 2024, 01:45 AM ISTUpdated : Jun 02, 2024, 04:30 AM IST
52 | Kannada Prabha

ಸಾರಾಂಶ

ಎಲ್ಲರೂ ಸಂತೋಷದಿಂದ ಊಟ ಮಾಡಿ ಮಲಗಿದ್ದಾರೆ. ಆದರೆ, ಸಿಲಿಂಡರ್ ನಿಂದ ಗ್ಯಾಸ್ ವಾಸನೆ ಬರುತ್ತಿತ್ತು. ಬೆಳಗ್ಗೆ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗೆ ತೋರಿಸೋಣ ಎಂದು ಮಲಗಿದ್ದಾರೆ. ಇದ್ದಕ್ಕಿದ್ದಂತೆ ಕರೆಂಟ್ ಶಾರ್ಟ್ ಸರ್ಕ್ಯೂಟ್ ಆಗಿದೆ. ತಕ್ಷಣ ಬೆಂಕಿ ತಗುಲಿದ್ದಿರಂದ ಬೆಂಕಿ ಇಡೀ ಮನೆ ಆವರಿಸಿಕೊಂಡಿದೆ.

  ಭೇರ್ಯ :  ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿ ಮನೆ ಸಂಪೂರ್ಣ ಭಸ್ಮವಾಗಿ ಕುಟುಂಬಸ್ಥರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಾರದಮ್ಮ ಈರಣ್ಣ ನಾಯಕ ಮತ್ತು ಜವರಮ್ಮ ಲೇಟ್ ಸುಬ್ಬನಾಯಕ ಎಂಬ ಎರಡು ಕುಟುಂಬಗಳು ಈ ಮನೆಯಲ್ಲಿ ವಾಸವಾಗಿದ್ದರು.

ಎಲ್ಲರೂ ಸಂತೋಷದಿಂದ ಊಟ ಮಾಡಿ ಮಲಗಿದ್ದಾರೆ. ಆದರೆ, ಸಿಲಿಂಡರ್ ನಿಂದ ಗ್ಯಾಸ್ ವಾಸನೆ ಬರುತ್ತಿತ್ತು. ಬೆಳಗ್ಗೆ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗೆ ತೋರಿಸೋಣ ಎಂದು ಮಲಗಿದ್ದಾರೆ. ಕುಟುಂಬದ ಸದಸ್ಯರ ದುರಾದೃಷ್ಟ ಇದ್ದಕ್ಕಿದ್ದಂತೆ ಕರೆಂಟ್ ಶಾರ್ಟ್ ಸರ್ಕ್ಯೂಟ್ ಆಗಿದೆ. ತಕ್ಷಣ ಬೆಂಕಿ ತಗುಲಿದ್ದಿರಂದ ಬೆಂಕಿ ಇಡೀ ಮನೆ ಆವರಿಸಿಕೊಂಡಿದೆ.

ಬೆಂಕಿ ಹೆಚ್ಚಾದಂತೆ ತಕ್ಷಣವೇ ಮನೆಯಲ್ಲಿ ಮಲಗಿದ್ದ ಶಾರದ, ಈರಣ್ಣ, ವಂದನಾ, ನವೀನ್ ಎದ್ದು ಮನೆಯಿಂದ ಹೊರಗಡೆ ಬಂದಿದ್ದಾರೆ. ಬೆಂಕಿಗೆ ಇಡೀ ಮನೆ ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. 

ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು. ತಕ್ಷಣ ಅಗ್ನಿಶಾಮಕ ದಳ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮನೆಯಲ್ಲಿದ್ದ ಗೃಹಬಳಕೆ ವಸ್ತುಗಳನ್ನ ಉಳಿಸಲು ಪ್ರಯತ್ನಿಸಿದರು. ಆದರೂ ಯಾವುದೇ ಗೃಹಬಳಕೆ ವಸ್ತುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಮನೆಯ ಗೃಹೋಪಯೋಗಿ ವಸ್ತುಗಳಾದ ಫ್ರಿಡ್ಜ್, ಟಿವಿ, ಮಿಕ್ಸಿ, ಬಟ್ಟೆ, ಐಸ್ ಕ್ರೀಮ್, ಕೂಲರ್, ಚಿನ್ನ, ಬೆಳ್ಳಿ ಮತ್ತು 1.42 ಲಕ್ಷ ನಗದುಸ ಚಾಮುಂಡೇಶ್ವರಿ ದೇವಿಯ ಒಡವೆಗಳು ಕೂಡ ಬೆಂಕಿಗೆ ಆಹುತಿ ಆಗಿದ್ದು, ಮನೆ ಹಾಗೂ ಗೃಹಬಳಕೆ ವಸ್ತುಗಳು ಸೇರಿ ಅಂದಾಜು 10 ಲಕ್ಷ ನಷ್ಟವಾಗಿದೆ. 

ವಾಸ ಮಾಡಲು ಮನೆ ಇಲ್ಲದೆ ಕುಟುಂಬಸ್ಥರು ಕಣ್ಣೀರೀಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇವರಿಗೆ ಪರಿಹಾರ ಒದಗಿಸುತ್ತಾರೆ ಎಂಬ ನಂಬಿಕೆ ಕುಟುಂಬಸ್ಥರಲ್ಲಿದೆ. ಈಸಂಬಂದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗ್ಯಾಸ್ ಸಿಲಿಂಡರ್ ಅನಿಲ ಸೋರಿಕೆಯಿಂದ ಉಂಟಾದ ಆಗ್ನಿ ಅವಘಡದ ಸುದ್ದಿ ತಿಳಿದ ಇಂಡೇನ್ ಗ್ಯಾಸ್ ಏಜನ್ಸಿ ಅವರು ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿ ಕುಟುಂಬಸ್ಥರಿಂದ ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡರು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!