ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮದ ಲಿಂಗರಾಜು (48) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ ಭಾರತಿ, ಪುತ್ರಿ ಚಂದ್ರಿಕಾ, ಪುತ್ರ ಮಹದೇವು ಇದ್ದಾರೆ. ಮೃತ ಲಿಂಗರಾಜು ಅವರಿಗೆ ಒಂದು ಎಕರೆ ಜಮೀನಿದ್ದು, ಮಗಳ ಮದುವೆಗೆಂದು ಖಾಸಗಿಯಾಗಿ 8 ಲಕ್ಷ ರು. ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 6 ಗಂಟೆ ಸಮಯದಲ್ಲಿ ಜಮೀನಿಗೆ ನೀರು ಹಾಯಿಸುವುದಾಗಿ ಹೇಳಿ ಹೋದವರು ರಾತ್ರಿ 9 ಗಂಟೆಯಾದರೂ ಮನೆಗೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಮಗ ಮಹದೇವು ಹುಡುಕಿಕೊಂಡು ಹೋದಾಗ, ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಮೃತ ಲಿಂಗರಾಜು ಅವರ ಪತ್ನಿ ಭಾರತಿ ಅವರು ಕ್ಯಾತನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಚಿರತೆ ದಾಳಿಗೆ ಕರು ಬಲಿಕನ್ನಡಪ್ರಭ ವಾರ್ತೆ ಮಳವಳ್ಳಿ
ಗೆಂಡೆಕರಿಯಯ್ಯ ಎಂಬುವವರಿಗೆ ಸೇರಿದ ಕರುವನ್ನು ಗ್ರಾಮದೊಳಗೆ ನುಗ್ಗಿರುವ ಚಿರತೆ ದಾಳಿ ನಡೆಸಿ ಹಿಂಬದಿ ಭಾಗವನ್ನು ಸಂಪೂರ್ಣವಾಗಿ ತಿಂದು ಹಾಕಿದೆ. ಇದರಿಂದ ಭಯಗೊಂಡಿರುವ ಗ್ರಾಮಸ್ಥರು ಕಾಡುಪ್ರಾಣಿಗಳನ್ನು ಹಿಡಿಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.