ಮಹಿಳೆಯೊಬ್ಬಳು ದೊಣ್ಣೆಯಿಂದ ಹೊಡೆದು ತನ್ನ ಗಂಡನನ್ನೇ ಕೊಲೆ ಮಾಡಿರುವ ಘಟನೆ ಇಲ್ಲಿನ ಗೌರಿ ಕಾಲುವೆ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ
ಚಿಕ್ಕಮಗಳೂರು: ಮಹಿಳೆಯೊಬ್ಬಳು ದೊಣ್ಣೆಯಿಂದ ಹೊಡೆದು ತನ್ನ ಗಂಡನನ್ನೇ ಕೊಲೆ ಮಾಡಿರುವ ಘಟನೆ ಇಲ್ಲಿನ ಗೌರಿ ಕಾಲುವೆ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸುರೇಶ್ (53) ಮೃತ ದುರ್ದೈವಿ. ಕೊಲೆ ಆರೋಪಿ ಪತ್ನಿ ಭಾರತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮರಗೆಲಸ ಮಾಡುತ್ತಿದ್ದ ಸುರೇಶ್ ಎಂದಿನಂತೆ ರಾತ್ರಿ ಮನೆಗೆ ಬಂದಿದ್ದಾರೆ. ಬಳಿಕ ಗಂಡ ಹೆಂಡತಿ ನಡುವೆ ಜಗಳವಾಗಿದ್ದು, ಆಗ ಭಾರತಿ ದೊಣ್ಣೆಯಿಂದ ಪತಿಯ ತಲೆಗೆ ಹೊಡೆದಿದ್ದಾಳೆ. ತೀವ್ರ ಸ್ವರೂಪದ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸುರೇಶ್ ಮೃತಪಟ್ಟಿದ್ದಾರೆ.