ಸಾರಿಗೆ ಬಸ್ಸಿನಲ್ಲಿ ಮಹಿಳೆ ಮಾಂಗಲ್ಯ ಸರ ಕಳವು: ದೂರು ದಾಖಲು

KannadaprabhaNewsNetwork |  
Published : Oct 11, 2024, 11:58 PM IST
10ಕೆಎಂಎನ್ ಡಿ16 | Kannada Prabha

ಸಾರಾಂಶ

ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆ ಸಿ.ಎಂ.ಚಿರಂಜೀವಿ ಪತ್ನಿ ಆರ್.ಪಿ.ಅಶ್ವಿನಿ ಅವರು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ 25 ಗ್ರಾಂ ತೂಕದ 1.40 ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಹಾಗೂ ಮೊಬೈಲ್ ಅನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗೃಹಿಣಿ ವ್ಯಾನಿಟಿ ಬ್ಯಾಗಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯಸರ ಹಾಗೂ ಮೊಬೈಲ್ ಕಳವು ಮಾಡಿರುವ ಘಟನೆ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಜರುಗಿದೆ.

ಪಟ್ಟಣದ ಶಿಕ್ಷಕರ ಬಡಾವಣೆ ಸಿ.ಎಂ.ಚಿರಂಜೀವಿ ಪತ್ನಿ ಆರ್.ಪಿ.ಅಶ್ವಿನಿ ಅವರು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ 25 ಗ್ರಾಂ ತೂಕದ 1.40 ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಹಾಗೂ ಮೊಬೈಲ್ ಅನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಆರ್.ಪಿ. ಅಶ್ವಿನಿ ಕಳೆದ ಅಕ್ಟೋಬರ್ 2ರಂದು ಮೈಸೂರಿನಲ್ಲಿರುವ ತನ್ನ ಸೋದರ ಮಾವನ ಮನೆಗೆ ಹೋಗಲು ಮದ್ದೂರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನೂಕು ನುಗ್ಗಲ ನಡುವೆ ಬಸ್ ಹತ್ತುತ್ತಿದ್ದಾಗ ಬ್ಯಾಗಿನಲ್ಲಿದ್ದ ಚಿನ್ನದ ಸರ ಹಾಗೂ ರೆಡ್ಮಿ ಮೊಬೈಲ್ ಅಪಹರಿಸಲಾಗಿದೆ ಎಂದು ಅಶ್ವಿನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫ್ರೀ ಬಸ್ ಬಳಿಕ ಸರಗಳ್ಳತನ ಹೆಚ್ಚಳ:

ಸರ್ಕಾರ ಜಾರಿಗೆ ತಂದಿರುವ ಫ್ರೀ ಬಸ್ ನಿಂದಾಗಿ ಮಹಿಳೆಯರಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಉಚಿತ ಬಸ್ ಪ್ರಯಾಣದಿಂದಾಗಿ ನಿತ್ಯ ನೂಕುನುಗ್ಗಲಿನಲ್ಲಿ ಮಹಿಳೆಯರು ಬಸ್ ಗಳನ್ನು ಹತ್ತುವ ಸಮಯದಲ್ಲಿ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕಳ್ಳರು ಕುತ್ತಿಗೆ, ವ್ಯಾನಿಟಿ ಬ್ಯಾಗ್ ಗಳಲ್ಲಿ ಮಹಿಳೆಯರು ಹಾಕುವ ಚಿನ್ನಾಭರಣಗಳನ್ನು ಅಪಹರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ವೇಳೆ ಸರಗಳ್ಳತನ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಪೊಲೀಸರು ಈ ಕೃತ್ಯಗಳಲ್ಲಿ ತೊಡಗಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.ಅಪರಿಚಿತ ವ್ಯಕ್ತಿ ಸಾವುಶ್ರೀರಂಗಪಟ್ಟಣ: ಪೇಪರ್ ಆಯುತ್ತಿದ್ದ ಅಪರಿಚಿತ ವ್ಯಕ್ತಿ ಕಾಯಿಲೆಗೆ ತುತ್ತಾಗಿ ಬೆಂಗಳೂರು ಮೈಸೂರು ರಸ್ತೆಯ ಮೋಹನ್ ಎಂಬುವವರು ಜಾಗದಲ್ಲಿ ಸಾವನ್ನಪ್ಪಿದ್ದಾನೆ. ವ್ಯಕ್ತಿಗೆ 45 ರಿಂದ 50 ವರ್ಷ, ಕೋಲು ಮುಖ, ಸಣಕಲು ಶರೀರ, ಕಪ್ಪು ಮತ್ತು ಬಿಳಿ ತಲೆ ಕೂದಲು, ಬಲಗೈ ಮೇಲೆ ರೂಪ ಹೆಸರಿನ ಹಸಿರು ಅಚ್ಚು ಇದ್ದು, ಪಾಚಿ ಹಸಿರು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಟ್ ಅನ್ನು ಧರಿಸಿದ್ದಾನೆ. ವಾರಸುದಾರರಿದ್ದಲ್ಲಿ ದೂ-0823222488/ಮೊ-9480804800/9480804855 ನ್ನು ಸಂಪರ್ಕಿಸಬಹುದು ಎಂದು ಶ್ರೀರಂಗಪಟ್ಟಣ ಪೋಲಿಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ತಿಳಿಸಿದ್ದಾರೆ.ಒಂದೇ ಕುಟುಂಬದ ನಾಲ್ವರು ನಾಪತ್ತೆ

ಶ್ರೀರಂಗಪಟ್ಟಣ:ತಾಲೂಕಿನ ಕಿರಂಗೂರು ಗ್ರಾಮದ ಒಂದೇ ಕುಟುಂಬದ ನಾಲ್ವರು ಕಾಣೆಯಾಗಿದ್ದಾರೆ. ಪ್ರಿಯದೇವಿ (28) ವರ್ಷ 5.2 ಅಡಿ ಎತ್ತರ, ಸಾಧಾರಣ ಶರೀರ, ಗೋದಿ ಮೈ ಬಣ್ಣ, ಕಪ್ಪನೆಯ ತಲೆ ಕೂದಲು ಇರುತ್ತದೆ. ಅಂಕಿತಾಕುಮಾರಿ (9) 3.9 ಅಡಿ ಎತ್ತರ,ಸಾಧಾರಣ ಶರೀರ, ಗೋದಿ ಮೈ ಬಣ್ಣ, ಅನುಷ್ಕಾಕುಮಾರಿ (8) 3.4 ಅಡಿ ಎತ್ತರ, ಬಿಳಿ ಮೈ ಬಣ್ಣ, ದುಂಡನೇಯ ಶರೀರ, ಹರ್ಷಿತಾಕುಮಾರಿ (4), 3 ಅಡಿ ಎತ್ತರ,ದುಂಡನೇಯ ಶರೀರ ಹೊಂದಿದ್ದಾರೆ. ಇವರುಗಳ ಸುಳಿವು ಸಿಕ್ಕಲ್ಲಿ ದೂ-08232-22488,ಮೊ-9480804800/9480804855 ಅನ್ನು ಸಂಪರ್ಕಿಸಬಹುದು ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮಹಾ ಪೊಲೀಸರಿಂದ ಬೆಂಗಳೂರಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಪತ್ತೆ!
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು