ಕೆರೆ ಏರಿ ಮೇಲಿನ ರಸ್ತೆಯಲ್ಲಿ ವಾಹನವೊಂದು ಡಿಕ್ಕಿಯಾಗಿ ಪಾದಾಚಾರಿಯೊಬ್ಬರು ಮೃತಪಟ್ಟಿರುವ ಘಟನೆಯು ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
- ದಾರಿಹೋಕರಿಂದ ಕುಟುಂಬಕ್ಕೆ ಮಾಹಿತಿ
---ಕನ್ನಡಪ್ರಭ ವಾರ್ತೆ ಯಳಂದೂರು
ಕೆರೆ ಏರಿ ಮೇಲಿನ ರಸ್ತೆಯಲ್ಲಿ ವಾಹನವೊಂದು ಡಿಕ್ಕಿಯಾಗಿ ಪಾದಾಚಾರಿಯೊಬ್ಬರು ಮೃತಪಟ್ಟಿರುವ ಘಟನೆಯು ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.ಮೆಲ್ಲಹಳ್ಳಿ ಗ್ರಾಮದ ನಾಗರಾಜು (ಪಾಪಣ್ಣ) (60) ಮೃತರು, ಪತ್ನಿ, ಒಬ್ಬ ಪುತ್ರನನ್ನು ಅಗಲಿದ್ದಾರೆ.
ಶನಿವಾರ ತಡರಾತ್ರಿ 10.30ರ ವೇಳೆಗೆ ಪಾಪಣ್ಣ ಅವರು ಕೆರೆ ಏರಿಯ ರಸ್ತೆ ಮೇಲೆ ಸಾಗುತ್ತಿದ್ದರು. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದುಹೋಗಿದೆ. ದುರದೃಷ್ಟವಶಾತ್ ಪಾಪಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದ ಸುಮಾರು ಹೊತ್ತು ಬಳಿಕ ದಾರಿಹೋಕರು ಪಾಪಣ್ಣರನ್ನು ಗುರುತಿಸಿ, ಅವರ ಕುಟುಂಬಕ್ಕೆ ಮಾಹಿತಿ ಮುಟ್ಟಿಸಿದ್ದಾರೆ.ಘಟನೆ ಸಂಬಂಧ ಪಾಪಣ್ಣ ಅವರ ಕುಟುಂಬ ನೀಡಿದ ದೂರಿನ ಮೇರೆಗೆ ಯಳಂದೂರು ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ಭಾನುವಾರ ನೆರವೇರಿತು.
ಬೀದಿ ದೀಪಗಳು ವ್ಯವಸ್ಥೆ ಕಲ್ಪಿಸಿ:ದುಗ್ಗಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೆಲ್ಲಹಳ್ಳಿ ಗ್ರಾಮದಿಂದ ಮೆಲ್ಲಹಳ್ಳಿ ಗೇಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲ. ಇದರಿಂದ ಪ್ರತಿನಿತ್ಯ ಸಾವಿರಾರು ಜನರು ಈ ದಾರಿಯಲ್ಲಿ ಹೊನ್ನೂರು, ಕೆಸ್ತೂರು, ಮೆಲ್ಲಹಳ್ಳಿ, ದುಗ್ಗಹಟ್ಟಿ, ಬೀಚಹಳ್ಳಿ ಗ್ರಾಮಗಳಿಗೆ ತೆರಳುತ್ತಾರೆ. ಹಾಗಾಗಿ ಇಲ್ಲಿಗೆ ಬೀದಿ ದೀಪವನ್ನು ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
---2202ವೈಎಲ್‌ಡಿಪಿ 01ನಾಗರಾಜು (ಪಾಪಣ್ಣ)