ವಸತಿ ಗೃಹದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ..!

KannadaprabhaNewsNetwork |  
Published : Jun 25, 2025, 01:18 AM IST
ವಸತಿ ಗೃಹದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ | Kannada Prabha

ಸಾರಾಂಶ

ವಸತಿ ಗೃಹದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಕುಂದೂರು ಗ್ರಾಮದ ಸಿದ್ದಪ್ಪರ ಪುತ್ರ ಕೆ.ಎಸ್.ಸುನೀಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಸತಿ ಗೃಹದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಕುಂದೂರು ಗ್ರಾಮದ ಸಿದ್ದಪ್ಪರ ಪುತ್ರ ಕೆ.ಎಸ್.ಸುನೀಲ್ (28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಮೈಸೂರು ರಸ್ತೆಯ ವಸತಿ ಗೃಹವೊಂದರಲ್ಲಿ ಸೋಮವಾರ ರಾತ್ರಿ ರೂಮ್ ಅನ್ನು ಬಾಡಿಗೆಗೆ ಪಡೆದಿದ್ದ ಕೆ.ಎಸ್.ಸುನೀಲ್ಮಂ ಗಳವಾರ ಮಧ್ಯಾಹ್ನವಾದರೂ ಹೊರಬಾರದ ಹಿನ್ನೆಲೆಯಲ್ಲಿ ವಸತಿ ಗೃಹದ ಸಿಬ್ಬಂದಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಸತಿಗೃಹದ ವ್ಯವಸ್ಥಾಪಕ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಮದ್ದೂರು: ಪಟ್ಟಣದ ಮೈಸೂರು - ಬೆಂಗಳೂರು ಸರ್ವಿಸ್ ರಸ್ತೆಯ ಪಕ್ಕದ ಮಿಲ್ಕ್ ಪಾರ್ಲರ್ ಹತ್ತಿರ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೈತಪಟ್ಟ ವ್ಯಕ್ತಿಯು ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತತಲೆ ಕೂದಲು, ಕುರುಚಲು ಗಡ್ಡ ಮೀಸೆ ಬಿಟ್ಟಿದ್ದು ಮೇಲ್ಬಾಗದ ಒಂದು ಹಲ್ಲು ಕೆಳತುಟಿಯ ಮೇಲಿದ್ದು, ಬಲಗೈನಲ್ಲಿ ‘ಜಯಮ್ಮ’ ಎಂದು ಹಸಿರು ಹಚ್ಚೆ ಇದ್ದು, ಎಡಗೈನಲ್ಲೂ ಅಸ್ಪಷ್ಟವಾದ ಹಚ್ಚೆ ಇದೆ. ಒಂದು ಬಿಳಿ ಬಣ್ಣದ ಕೊಳಕಾದ ಶರ್ಟ್, ಒಂದು ಕೊಳಕಾದ ಗ್ರೇ ಬಣ್ಣದ ಪ್ಯಾಂಟ್ ಹಾಗೂ ಸೊಂಟದಲ್ಲಿ ಒಂದು ಎಳೆ ಕಪ್ಪು ಉಡುದಾರ ಧರಿಸಿರುತ್ತಾರೆ. ಮೃತ ಅಪರಿಚಿತ ಗಂಡಸಿನ ವಾರಸುದಾರರಿದ್ದಲ್ಲಿ ದೂ.08232-232170/468245 /ಮೊ-9480804869 / 08232-224888 ಅನ್ನು ಸಂಪರ್ಕಿಸುವಂತೆ ಮದ್ದೂರು ಠಾಣೆ ಪೊಲೀಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ಕಲಹ: ಕೊಲೆ ಅಂತ್ಯ
ಪೊಲೀಸ್‌ ಠಾಣೆ ಸಮೀಪ ಪಾನಮತ್ತ ದಂಪತಿಯ ರಂಪಾಟ