ಮೆಟ್ರೋದಲ್ಲಿ ಆಟಿಕೆ ಗನ್‌ ಇಟ್ಟುಕೊಂಡಿದ್ದ ಯುವಕ ವಶಕ್ಕೆ

KannadaprabhaNewsNetwork |  
Published : Mar 09, 2026, 04:00 AM ISTUpdated : Mar 10, 2026, 03:59 AM IST
Namma Metro

ಸಾರಾಂಶ

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೇಬಿನಲ್ಲಿ ನಕಲಿ ಗನ್‌ ಇಟ್ಟುಕೊಂಡು ಪ್ರಾಂಕ್‌ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ.ಪಾಂಡಿಚೇರಿ ಮೂಲದ ಅರ್ಜುನ್‌ ಎಂಬಾತನನ್ನು ವಶಕ್ಕೆ ಪಡೆದು, ಕ್ಷಮಾಪಣಾಪತ್ರ ಬರೆಸಿಕೊಂಡು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಬೆಂಗಳೂರು :  ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೇಬಿನಲ್ಲಿ ನಕಲಿ ಗನ್‌ ಇಟ್ಟುಕೊಂಡು ಪ್ರಾಂಕ್‌ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ.

ಪಾಂಡಿಚೇರಿ ಮೂಲದ ಅರ್ಜುನ್‌ ಎಂಬಾತನನ್ನು ವಶಕ್ಕೆ ಪಡೆದು, ಕ್ಷಮಾಪಣಾಪತ್ರ ಬರೆಸಿಕೊಂಡು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಾಂಕ್‌ ವಿಡಿಯೋ ಮಾಡಲು ಗನ್‌ ಇಟ್ಟುಕೊಂಡಿದ್ದ

 ಫೆ.6 ರಂದು ಅರ್ಜುನ್‌ ದೀಪಾಂಜಲಿ ನಗರದಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಾಂಕ್‌ ವಿಡಿಯೋ ಮಾಡಲು ತನ್ನ ಜೇಬಿನಲ್ಲಿ ಆಟಿಕೆಯ ಗನ್‌ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಗನ್‌ ಕಂಡು ಕೋಪಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಮೆಟ್ರೋ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕ್ಷಮಾಪಣಾಪತ್ರ ಬರೆಸಿಕೊಂಡಿದ್ದಾರೆ.

ಅರ್ಜುನ್‌ನಿಂದ ತಪ್ಪೊಪ್ಪಿಗೆ

 ಈ ವೇಳೆ ಅರ್ಜುನ್‌ನಿಂದ ತಪ್ಪೊಪ್ಪಿಗೆ ಪಡೆದುಕೊಂಡಿದ್ದು ಅದನ್ನು ಬಿಸಿಪಿ ಖಾತೆಯಲ್ಲಿ ಅಪ್‌ಲೋಡ್‌ ಮಾಡಿ ಜಾಗೃತಿ ಮೂಡಿಸಿದ್ದಾರೆ. ತಮಾಷೆ ಅಲ್ಲ: ಆಟಿಕೆ ಗನ್‌ನಿಂದ ಮಾಡುವ ಪ್ರಾಂಕ್ ಯಾವುದೇ ತಮಾಷೆ ಅಲ್ಲ. ಇದು ಸಾರ್ವಜನಿಕರಲ್ಲಿ, ಭಯ ಹುಟ್ಟಿಸಿ, ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟು ಮಾಡಬಹುದು. ಸಾರ್ವಜನಿಕ ಸ್ಥಳಗಳು ಅಪಾಯಕಾರಿ ಕಂಟೆಂಟ್‌ಗೆ ಸ್ಥಳವಲ್ಲ. ಈ ರೀತಿಯಲ್ಲಿ ವರ್ತಿಸುವ ಮುನ್ನ ಯೋಚಿಸಿ. ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಾರೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

2 ತಿಂಗಳಲ್ಲಿ 24 ಅಪರಾಧ ಪ್ರಕರಣಗಳ ಪತ್ತೆ: 29.97 ಲಕ್ಷ ಮೌಲ್ಯದ ವಸ್ತು ವಶ
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಮದುವೆಯಾಗಿದ್ದ ಪತ್ನಿ ಸೇರಿ ಅತ್ತೆ, ಮಾವನಿಗೆ ಬೆಂಕಿ ಹಚ್ಚಿದವ ಬಂಧನ