ಕನ್ನಡಪ್ರಭ ವಾರ್ತೆ ಮೈಸೂರು
ಜಿಂದಗಿ ಖ್ಯಾತಿಯ ರಗಡ್ ಸ್ಟಾರ್ ರಾಜೀವ್ ರೆಡ್ಡಿ ಹಾಗೂ ಖ್ಯಾತ ಖಳನಟ ರವಿಶಂಕರ್ ಅಭಿನಯದ ವಿಭಿನ್ನ ಕಥಾ ಹಂದರದ ಚಲನಚಿತ್ರ ಕ್ಯಾಪಿಟಲ್‌ಸಿಟಿ ಸಿನಿಮಾ ಜು.4ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ ಎಂದು ನಿರ್ದೇಶಕ ಅನಂತರಾಜು ತಿಳಿಸಿದರು.ಅಕ್ಕ- ತಮ್ಮ- ತಂದೆ- ಮಗಳ ಭಾವನಾತ್ಮಕ ಸಂಬಂಧ ಆಧಾರಿತ ಸಿನಿಮಾ ಇದಾಗಿದೆ. ಇದು 5 ಭಾಷೆಗಳಲ್ಲಿ ಮೂಡಿ ಬಂದಿದ್ದು, ಸುಮಾರು 200 ಪರದೆಗಳಲ್ಲಿ ತೆರೆ ಕಾಣಲಿದೆ. 25 ಮಂದಿ ಒಟ್ಟುಗೂಡಿ ನಿರ್ಮಿಸಿರುವ ಚಿತ್ರ ಇದಾಗಿದೆ. ಪ್ರೇರಣಾ ಸಿನಿಮಾದ ನಾಯಕಿಯಾಗಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶದ ಸಿನಿಮಾ ಇದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಂದಗಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಸುದೀಪ್ ನಟನೆಯ ಮಸ್ತ ಮಜಾ ಮಾಡಿ ನೋಡಿ, ಶಿವರಾಜ್ ಕುಮಾರ್ ಅಭಿನಯದ ನಂದಾ ಅತಿಹೆಚ್ಚು ಸಕ್ಸಸ್ ನೀಡಿದ ನಿರ್ದೇಶಕ ಅನಂತ್ ರಾಜು ಕ್ಯಾಪಿಟಲ್ ಸಿಟಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಕ್ಯಾಪಿಟಲ್ ಸಿಟಿ ಯಲ್ಲಿ ಪ್ರೇಕ್ಷಕರಿಗೆ ಹೆಚ್ಚು ಮನೋರಂಜನೆ ನೀಡಲಿದೆ ಎಂದು ರಗಡ್ ಸ್ಟಾರ್ ರಾಜೀವ್ ಹೇಳಿದರು.ಕ್ಯಾಪಿಟಲ್ ಸಿಟಿ ನನ್ನ 11ನೇ ಸಿನಿಮಾ. ಈ ಸಿನಿಮಾ ಆಕ್ಷನ್ ಓರಿಯೆಂಟೆಡ್ ಸಿನಿಮಾವಾದರು ಸಮಾಜಕ್ಕೆ ಅತ್ಯತ್ತುಮ ಸಂದೇಶವಿದೆ. ಕ್ಯಾಪಿಟಲ್ ಸಿನಿಮಾ 5 ಭಾಷೆಗಳಲ್ಲಿ ಮೂಡಿ ಬಂದಿದ್ದು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಲಿದ್ದೇವೆ. ನಂತರ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲು ಕನ್ನಡಿಗರು ಸಿನಿಮಾ ನೋಡಿ ಎಂದು ಅನಂತರಾಜು ತಮ್ಮ ಸಿನಿಮಾ ಬಗ್ಗೆ ಮಾತನಾಡಿದರು.
ಕ್ಯಾಪಿಟಲ್ ಸಿನಿಮಾದಲ್ಲಿ ರವಿಶಂಕರ್, ತೆಲುಗಿನ ಸುಮಂತ್ , ಶರತ್ ಲೋಹಿತಾಶ್ವ, ಕಾಮೆಡಿ ಕಿಲಾಡಿಗಳು ಖ್ಯಾತಿಯ ರಿತೇಶ್ ಸೇರಿದಂತೆ ದೊಡ್ಡ ತಾರ ಬಳಗವಿದೆ. ಕನ್ನಡ ಭಾಷೆಯಲ್ಲಿ 200 ಕ್ಕೂ ಹೆಚ್ಚು ಚಿತ್ರಂದಿರಗಳಲ್ಲಿ ರಿಲೀಸ್ ಆಗಲಿದ್ದು ಪ್ರೇರಣಾ ಸಿನಿಮಾದ ನಾಯಕಿಯಾಗಿ ಪ್ರತಿಭೆ ತೋರಿಸಿದ್ದಾರೆ.ಕ್ಯಾಪಿಟಲ್ ಸಿಟಿ ಸಿನಿಮಾ ನಿರ್ಮಾಣಕ್ಕೆ ಇನ್ ಫಿನಿಟಿ ಕ್ರಿಯೇಷನ್ಸ್ ಬ್ಯಾನರ್ ಹಲವು ನಿರ್ಮಾಪಕರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಶಿವಪ್ಪ ಕುಡ್ಲೂರು ಈ ಸಿನಿಮಾಕ್ಕೆ ಕೈ ಜೋಡಿಸಿ ಖಳನಟನಾಗಿ ಅಭಿನಯಿದ್ದಾರೆ. ಬಾಬು ರೆಡ್ಡಿ, ಆನೇಕಲ್ ನಾಗರಾಜ್, ಕೃಷ್ಣಮೂರ್ತಿ, ಕೆ.ಟಿ.ಮುನಿರಾಜು ಹಾಗೂ ಮಂಜುನಾಥ್ ಕ್ಯಾಪಿಟಲ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂದರು.