ಕನ್ನಡಪ್ರಭ ಸಿನಿವಾರ್ತೆ
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ‘ಇತ್ತೀಚಿನ ವರ್ಷಗಳಲ್ಲಿ ಸಕ್ಸಸ್ ಸಂಭ್ರಮಗಳ ಅರ್ಥ ಬದಲಾಗಿದೆ. 50, 100, 25 ವಾರ, 75 ವಾರಗಳ ನಂತರ ಒಂದು ಸಿನಿಮಾ ಯಶಸ್ಸಿನ ಸಂಭ್ರಮ ಆಚರಿಸಿಕೊಳ್ಳುತ್ತಿತ್ತು. ಈಗ 25 ದಿನಕ್ಕೆ ಬಂದಿದೆ. ಹಾಕಿದ ಹಣ ನಿರ್ಮಾಪಕನಿಗೆ ವಾಪಸ್ಸು ಬಂದರೆ ಅದೇ ಸಕ್ಸಸ್. ನಮ್ಮ ಸಿನಿಮಾ ಎಲ್ಲರಿಗೂ ಮೆಚ್ಚುಗೆ ಆಗಿದೆ. ನೋಡಿದವರು ಇಷ್ಟಪಟ್ಟಿದ್ದಾರೆ. ಅದೇ ದೊಡ್ಡ ಗೆಲುವು’ ಎಂದರು. ನಟ ವಿನಯ್ ರಾಜ್‌ಕುಮಾರ್, ‘ಒಂದು ಒಳ್ಳೆಯ ಸಿನಿಮಾ ಕೊಟ್ಟ ಖುಷಿ ಇದೆ. ನನಗೆ ತುಂಬಾ ಹತ್ತಿರವಾದ ಸಿನಿಮಾ’ ಎಂದರು. ಸಂಗೀತ ನಿರ್ದೇಶಕ ವೀರ್‌ಸಮರ್ಥ್, ಕತೆಗಾರ ಎಂ.ಎಲ್. ಪ್ರಸನ್ನ, ಪೋಷಕ ನಟಿ ಅರುಣಾ ಬಾಲರಾಜ್, ನಿರ್ಮಾಪಕ ಮೈಸೂರು ರಮೇಶ್ ಇದ್ದರು.