‘ನನ್ನ ಬ್ಯಾಗ್ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ, ಮಗಳು ಎರಡು ದಿನದ ಹಿಂದೆ ತಿಂದು ಬಿಟ್ಟಿದ್ದ ತೇಪ್ಲಾ (ತಿಂಡಿ). ಅವಳು ಬಂದಮೇಲೆ ನನ್ನ ಬದುಕೇ ಅವಳಾಗಿದ್ದಾಳೆ. ಮಗಳು ದುವಾ ನನ್ನ ಅಬ್ಸೆಶನ್’.
ಸಿನಿವಾರ್ತೆ
‘ನನ್ನ ಬ್ಯಾಗ್ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ, ಮಗಳು ಎರಡು ದಿನದ ಹಿಂದೆ ತಿಂದು ಬಿಟ್ಟಿದ್ದ ತೇಪ್ಲಾ (ತಿಂಡಿ). ಅವಳು ಬಂದಮೇಲೆ ನನ್ನ ಬದುಕೇ ಅವಳಾಗಿದ್ದಾಳೆ. ಮಗಳು ದುವಾ ನನ್ನ ಅಬ್ಸೆಶನ್’.
ಮಗಳ ಕುರಿತಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಇದು ಮಗಳ ಕುರಿತಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಡಿರುವ ಮಾತು. ಅವರ ಮಗಳು ದುವಾಗೆ ಈಗ ಒಂದೂವರೆ ವರ್ಷ. ಮಗಳಿಗೆ ಸಮಯ ನೀಡುವ ನಿಟ್ಟಿನಲ್ಲಿ ದೀಪಿಕಾ ಚಿತ್ರತಂಡದ ಮುಂದೆ ಬೇಡಿಕೆಯಿಟ್ಟು ಇದೇ ಕಾರಣಕ್ಕೆ ಸಿನಿಮಾದಿಂದ ಹೊರಬಂದ ಪ್ರಕರಣ ಕೆಲವು ದಿನದ ಹಿಂದೆ ನಡೆದಿತ್ತು. ಇದೀಗ ಅವರು ಮತ್ತೊಮ್ಮೆ ಮಗಳ ಜೊತೆಗಿನ ಬಾಂಧವ್ಯದ ಬಗ್ಗೆ ಆರ್ದ್ರನುಡಿಗಳನ್ನಾಡಿದ್ದಾರೆ.
‘ಮಗಳೀಗ ಅವಳ ತಲೆ, ಭುಜ, ಮಂಡಿ, ಬೆರಳುಗಳ ಬಗ್ಗೆ ತಿಳಿದುಕೊಂಡಿದ್ದಾಳೆ. ಅದನ್ನು ಮತ್ತೆ ಮತ್ತೆ ಹೇಳಿ ಕನ್‌ಫರ್ಮ್ ಮಾಡಿಕೊಳ್ಳುತ್ತಾಳೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮಗು ಅನ್ನೋದನ್ನು ನಾನವಳಿಗೆ ಅತೀಹೆಚ್ಚು ಹೇಳುತ್ತೇನೆ’ ಎಂದೂ ದೀಪಿಕಾ ಹೇಳಿದ್ದಾರೆ.