;Resize=(412,232))
70ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಕೇರಳದ ಕೊಚ್ಚಿನ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಸಿನಿಮಾದಲ್ಲಿನ ನಟನೆಗೆ ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ‘ಬಘೀರ’ ಚಿತ್ರದ ಅಭಿನಯಕ್ಕೆ ಶ್ರೀಮುರಳಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ.
ವಿಮರ್ಶಕರ ಆಯ್ಕೆ ವಿಭಾಗದಲ್ಲಿ ನಟಿ ಅಂಕಿತಾ ಅಮರ್, ನಟ ಗೌರಿಶಂಕರ್ ಅತ್ಯುತ್ತಮ ನಟಿ, ನಟ ಪ್ರಶಸ್ತಿ ಪಡೆದರೆ, ಪ್ರಿಯಾ ಷಟಮರ್ಶನ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅತ್ಯುತ್ತಮ ಪೋಷಕ ಕಲಾವಿದರಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿರ್ದೇಶಕ ಪೃಥ್ವಿ ಕೊಣನೂರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಗೀತರಚನಕಾರ ಡಾ.ನಾಗೇಂದ್ರ ಪ್ರಸಾದ್, ಹಿನ್ನೆಲೆ ಗಾಯಕ ಜಸ್ಕರಣ್ ಸಿಂಗ್ ಪ್ರಶಸ್ತಿಗೆ ಭಾಜನರಾದ ಇತರರು. ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿದೆ.
ಹತ್ತುವರ್ಷದಲ್ಲಿ ಕಂಟೆಂಟ್ ಆಧರಿತ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದು ನನ್ನ ಮೊದಲ ಫಿಲಂಫೇರ್ ಪ್ರಶಸ್ತಿ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಬ್ರೇಕ್‌ಗಾಗಿ ಕಾಯುತ್ತಿರುವ ಪ್ರತಿಯೊಬ್ಬ ನಟಿಯರಿಗೆ ಇದನ್ನು ಅರ್ಪಣೆ ಮಾಡುತ್ತೇನೆ.
ಇದು ನನ್ನ ಮೊದಲ ಫಿಲಂಫೇರ್ ಪ್ರಶಸ್ತಿ. ಈ ಗೌರವಕ್ಕೆ ನನ್ನ ಸಿನಿಮಾ ಜರ್ನಿಯ ಏರಿಳಿತಗಳಲ್ಲಿ ಜೊತೆಯಾದ ಅಭಿಮಾನಿಗಳ ಕೊಡುಗೆಯೂ ದೊಡ್ಡದು. ಅವರಿಗೆ ಈ ಪ್ರಶಸ್ತಿ ಅರ್ಪಣೆ.
- ಶ್ರೀಮುರಳಿ