ಗೌರಿ ಜತೆ ಸಂಬಂಧ : ಧೃಡಪಡಿಸಿದ ನಟ ಅಮೀರ್‌ ಖಾನ್‌ - 60ನೇ ಜನ್ಮದಿನ ಹತ್ತಿರವಿರುವಾಗ ವಿಷಯ ಬಹಿರಂಗ

ಸಾರಾಂಶ

ನಟ ಅಮೀರ್‌ ಖಾನ್‌, ಬೆಂಗಳೂರಿನ ಮಹಿಳೆ ಜತೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ.

ಮುಂಬೈ: ನಟ ಅಮೀರ್‌ ಖಾನ್‌, ಬೆಂಗಳೂರಿನ ಮಹಿಳೆ ಜತೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ. ತಮ್ಮ 60ನೇ ಜನ್ಮದಿನಕ್ಕೂ ಕೆಲವೇ ದಿನಗಳಿರುವಾಗ ಸ್ವತಃ ಖಾನ್‌, ಗೌರಿ ಸ್ಪ್ರಾಟ್ ಜೊತೆ ಕಳೆದ 18 ತಿಂಗಳನಿಂದ ಪ್ರೇಮ ಸಂಬಂಧ ಹೊಂದಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

ಕಳೆದ 25 ವರ್ಷದಿಂದ ಅಮೀರ್‌ಗೆ ಪರಿಚಯವಿದ್ದ ಗೌರಿ, ಅಮೀರ್‌ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಅವಳಿ ಮಕ್ಕಳಿದ್ದಾರೆ. ಆಮಿರ್‌ ಅವರೊಂದಿಗೆ ವಾಸವಿರುವ ಗೌರಿ ಈಗಾಗಲೇ ಅವರ ಪರಿವಾರವನ್ನೂ ಭೇಟಿಯಾಗಿದ್ದು, ಅವರಿಬ್ಬರ ಸಂಬಂಧಕ್ಕೆ ಒಪ್ಪಿಗೆ ದೊರಕಿದೆ.

 ನಟ ಆಮಿರ್‌ 2021ರ ಜುಲೈನಲ್ಲಿ ಕಿರಣ್‌ ಅವರಿಗೆ ವಿಚ್ಛೇದನ ನೀಡಿದ್ದರು. ಅದಕ್ಕೂ ಮೊದಲು 1996ರಲ್ಲಿ ರೀನಾ ದತ್ತಾರನ್ನು ಮದುವೆಯಾಗಿ 2002ರಲ್ಲಿ ಡೈವೋರ್ಸ್‌ ನೀಡಿದ್ದರು.

Share this article