ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಶುಭಾ ಪೂಂಜಾ ದಂಪತಿ

Published : Jun 05, 2026, 12:12 PM IST
Shubha Poonja

ಸಾರಾಂಶ

ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದು, ಈ ಸಂಬಂಧ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

  ಬೆಂಗಳೂರು :  ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದು, ಈ ಸಂಬಂಧ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಸುಮಂತ್​ ಬಿಲ್ಲವ ಅವರನ್ನು ಮದುವೆ

2022ರಲ್ಲಿ, ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಸುಮಂತ್​ ಬಿಲ್ಲವ ಅವರನ್ನು ಶುಭಾ ಪೂಂಜಾ ಮದುವೆಯಾಗಿದ್ದರು. ನಂತರ, ಹಲವು ರಿಯಾಲಿಟಿ ಶೋಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಜನರ ಪ್ರೀತಿ ಗಳಿಸಿದ್ದರು. ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ.  

ಜೂನ್ 2ರಂದು ವಿಚ್ಛೇದನಕ್ಕೆ ಅರ್ಜಿ

ಜೂನ್ 2ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಜೂನ್‌ 3ರಂದು ಮೊದಲ ವಿಚಾರಣೆ ನಡೆದಿದೆ. ಜೂನ್ 10ರಂದು ಎರಡನೇ ಹಿಯರಿಂಗ್ ನಡೆಯಲಿದೆ. ಆದರೆ, ಈ ಕುರಿತು ಶುಭಾ ಹಾಗೂ ಸುಮಂತ್‌ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಮುಂಬೈನ ಅಲಿಬಾಗ್‌ನಲ್ಲಿ ಐಷಾರಾಮಿ ಆಸ್ತಿ ಖರೀದಿಸಿದ ರಾಧಿಕಾ ಪಂಡಿತ್- ಯಶ್
ಯೋಗ್ಯತೆ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ: ಕಂಗನಾ ರಾಣಾವತ್‌