ಶಶಿಕುಮಾರ್‌ ಪುತ್ರನ ಹೊಸ ಸಿನಿಮಾ ಕಾದಾಡಿ

KannadaprabhaNewsNetwork |  
Published : Jun 01, 2024, 12:45 AM ISTUpdated : Jun 01, 2024, 06:31 AM IST
ಕಾದಾಡಿ | Kannada Prabha

ಸಾರಾಂಶ

ಅಕ್ಷಿತ್‌ ಎಂದಿದ್ದ ತನ್ನ ಹೆಸರನ್ನು ಆದಿತ್ಯ ಎಂದು ಬದಲಿಸಿಕೊಂಡಿದ್ದಾರೆ ಅಕ್ಷಿತ್‌ ಶಶಿಕುಮಾರ್‌.

 ಸಿನಿವಾರ್ತೆ

ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಹೊಸ ಸಿನಿಮಾ ‘ಕಾದಾಡಿ’. ಈ ಚಿತ್ರಕ್ಕಾಗಿ ಅಕ್ಷಿತ್‌ ಶಶಿಕುಮಾರ್‌ ಎಂದಿದ್ದ ತನ್ನ ಹೆಸರನ್ನು ಆದಿತ್ಯ ಎಂದು ಬದಲಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಚಿತ್ರಕ್ಕೆ ಸತೀಶ್ ಮಾಲೆಂಪಾಟಿ ನಿರ್ದೇಶನ, ನಿರ್ಮಾಣವಿದೆ.

ಈ ಸಿನಿಮಾದ ‘ಕಲೆಯು ಇರಬೇಕು, ಮನೆಯು ಇರಬೇಕು’ ಎಂಬ ಹಾಡು ಇತ್ತೀಚೆಗೆ ಆದಿತ್ಯ ಮೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಬದುಕಿನಲ್ಲಿ ತ್ಯಾಗದ ಮಹತ್ವವನ್ನು ಹೇಳುವ ಕಥೆ ಚಿತ್ರದ್ದು. ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ ಮನೋಹರ್ ನಟಿಸಿದ್ದಾರೆ.

ಈ ಸಿನಿಮಾ ಜೂನ್‌ನಲ್ಲಿ ತೆರೆಗೆ ಬರಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2026ರ ಬಹು ನಿರೀಕ್ಷಿತ ಸಿನಿಮಾಗಳು
ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಕ್‌ ವೈಭವ