ಉಪೇಂದ್ರ ಅವರ ನಟನೆಯ ‘ಭಾರ್ಗವ’ ಚಿತ್ರಕ್ಕೆ ನಾಯಕಿಯಾಗಿ ಅಂಕಿತಾ ಅಮರ್ ಆಯ್ಕೆ ಆಗಿದ್ದಾರೆ.
ಸಿನಿವಾರ್ತೆ
ಉಪೇಂದ್ರ ಅವರ ನಟನೆಯ ‘ಭಾರ್ಗವ’ ಚಿತ್ರಕ್ಕೆ ನಾಯಕಿಯಾಗಿ ಅಂಕಿತಾ ಅಮರ್ ಆಯ್ಕೆ ಆಗಿದ್ದಾರೆ. ಇದು ನಾಗಣ್ಣ ನಿರ್ದೇಶನ ಮಾಡುತ್ತಿರುವ, ಸೂರಪ್ಪ ಬಾಬು ನಿರ್ಮಿಸುತ್ತಿರುವ ಚಿತ್ರ. ಅಕ್ಷಯ ತೃತೀಯ ಸಂಭ್ರಮಕ್ಕೆ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ‘ಇಬ್ಬನಿ ತಬ್ಬಿದ ಇಳೆಯಲಿ’, ‘ಜಸ್ಟ್ ಮ್ಯಾರೀಡ್’ ಹಾಗೂ ‘ಅಬ ಜಬ ದಬ’ ಮುಂತಾದ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿರುವ ನಟಿ ಅಂಕಿತಾ ಅಮರ್.
ನಟ ಉಪೇಂದ್ರ ಅವರೇ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿನ ಅಂಕಿತಾ ಅಮರ್ ನಟನೆ ನೋಡಿದ ನಂತರ ‘ಭಾರ್ಗವ’ ಚಿತ್ರದ ನಾಯಕಿ ಪಾತ್ರಕ್ಕೆ ಸೂಕ್ತ ಎಂದು ಹೇಳಿದ್ದರಿಂದ ರಿಯಲ್ ಸ್ಟಾರ್ ಜತೆಗೆ ನಾಯಕಿಯಾಗುವ ಅವಕಾಶ ಅಂಕಿತಾ ಅಮರ್ ಅವರಿಗೆ ಸಿಕ್ಕಿದೆ. ಸದ್ಯದಲ್ಲೇ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದೆ. ಚಿತ್ರದ ಉಳಿದ ತಾರಾಗಣ ಇನ್ನಷ್ಟೇ ಆಯ್ಕೆ ಆಗಬೇಕಿದೆ.