ಸಿನಿವಾರ್ತೆ
‘ಬಾಹುಬಲಿ 3 ಬರಲಿದೆ. ಈ ಬಗ್ಗೆ ಬಾಹುಬಲಿ: ದಿ ಎಪಿಕ್‌ನಲ್ಲಿ ಹಿಂಟ್ ಕೊಟ್ಟಿದ್ದೇವೆ’.
- ಹೀಗೆ ಹೇಳುವ ಮೂಲಕ ಪ್ರಭಾಸ್ ಹಾಗೂ ರಾಜಮೌಳಿ ಅಭಿಮಾನಿಗಳ ಕ್ರೇಜ್‌ಗೆ ಕಾರಣವಾಗಿರುವುದು ‘ಬಾಹುಬಲಿ’ ಚಿತ್ರದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು. ನಿರ್ಮಾಪಕರ ಈ ಹೇಳಿಕೆ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಅಂದಹಾಗೆ ಶೋಭು ಯರ್ಲಗಡ್ಡ ಅವರು ಹೀಗೆ ಹೇಳಿರುವುದು ‘ಬಾಹುಬಲಿ: ದಿ ಎಪಿಕ್’ ಬಿಡುಗಡೆಯ ಹಿನ್ನೆಲೆಯಲ್ಲಿ. ಈಗಾಗಲೇ ತೆರೆ ಕಂಡಿರುವ 5 ಗಂಟೆಗಳ ಅವಧಿಯ ‘ಬಾಹುಬಲಿ: ದಿ ಬಿಗಿನಿಂಗ್’ ಹಾಗೂ ‘ಬಾಹುಬಲಿ: ದಿ ಕನ್ಕ್ಲೂಷನ್’ ಈ ಎರಡೂ ಪಾರ್ಟ್‌ಗಳನ್ನು ಸೇರಿಸಿ 3.40 ಗಂಟೆ ಅವಧಿಯ ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ಇದೇ ಅಕ್ಟೋಬರ್ 31ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ.
‘ಬಾಹುಬಲಿ ಚಿತ್ರ ತೆರೆಗೆ ಬಂದು ಹತ್ತು ವರ್ಷಗಳಾಗಿವೆ. ಈ ನೆನಪಿನಲ್ಲಿ ‘ಬಾಹುಬಲಿ: ದಿ ಎಪಿಕ್’ ತೆರೆಗೆ ಬರುತ್ತಿದ್ದು, ಈ ಚಿತ್ರ ನೋಡಲು ಹೋಗುವ ಪ್ರೇಕ್ಷಕರಿಗೆ ಹಲವು ವಿಶೇಷಗಳು ಕಾದಿವೆ. ಈ ಪೈಕಿ ಪಾರ್ಟ್ 3 ಕೂಡ ಒಂದು. ಅಂದರೆ ಮರು ಬಿಡುಗಡೆಯ ಚಿತ್ರದಲ್ಲಿ ಪಾರ್ಟ್ 3 ಬರುವ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರುವುದು ಅಂಥ ವಿಶೇಷತೆಗಳಲ್ಲಿ ಒಂದಾಗಿದೆ’ ಎಂದು ಶೋಭು ಯರ್ಲಗಡ್ಡ ಅವರು ತಿಳಿಸಿದ್ದಾರೆ.