ಕೃತಕವಾಗಿ ಗರ್ಭ ಧರಿಸಿದ್ದ ನಟಿ ಭಾವನಾಗೆ ಹೆಣ್ಣು ಮಗು ಜನನ

Published : Sep 07, 2025, 09:34 AM IST
Bhavana Ramanna

ಸಾರಾಂಶ

ನಟಿ ಭಾವನಾ ರಾಮಣ್ಣ ಅವರು ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಒಂದು ವಾರದ ಹಿಂದೆಯೇ ಅವರಿಗೆ ಹೆರಿಗೆ ಆಗಿದ್ದು, ಗರ್ಭಾವಸ್ಥೆಯಲ್ಲಿ ಸಮಸ್ಯೆಯಿದ್ದ ಕಾರಣ ಎಂಟನೇ ತಿಂಗಳಲ್ಲೇ ಹೆರಿಗೆ ಮಾಡಲಾಗಿದೆ ಎನ್ನಲಾಗಿದೆ

  ಬೆಂಗಳೂರು :  ನಟಿ ಭಾವನಾ ರಾಮಣ್ಣ ಅವರು ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಒಂದು ವಾರದ ಹಿಂದೆಯೇ ಅವರಿಗೆ ಹೆರಿಗೆ ಆಗಿದ್ದು, ಗರ್ಭಾವಸ್ಥೆಯಲ್ಲಿ ಸಮಸ್ಯೆಯಿದ್ದ ಕಾರಣ ಎಂಟನೇ ತಿಂಗಳಲ್ಲೇ ಹೆರಿಗೆ ಮಾಡಲಾಗಿದೆ ಎನ್ನಲಾಗಿದೆ. ಹೆರಿಗೆ ಸಮಯದಲ್ಲಿ ಒಂದು ಮಗು ತೀರಿಕೊಂಡಿದ್ದು, ಇನ್ನೊಂದು ಮಗು ಮತ್ತು ಭಾವನಾ ಅವರು ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿಯಾಗುವ ನಿರ್ಧಾರ ಮಾಡಿದ್ದ ಭಾವನಾ ರಾಮಣ್ಣ ಅವರ ತಾಯಿ ಆಗುವ ಕನಸಿಗೆ ದೊಡ್ಡ ಮಟ್ಟದಲ್ಲಿ ಶುಭ ಹಾರೈಕೆಗಳು ಬಂದಿದ್ದವು. ಏಳನೇ ತಿಂಗಳಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಕೂಡ ಮಾಡಿಕೊಂಡಿದ್ದರು.

ವೈದ್ಯರು ಅಕ್ಟೋಬರ್‌ ತಿಂಗಳಲ್ಲಿ ಹೆರಿಗೆಗೆ ದಿನಾಂಕ ನಿಗದಿ ಮಾಡಿದ್ದು, ಹೊಟ್ಟೆಯೊಳಗಿದ್ದ ಎರಡು ಮಕ್ಕಳ ಪೈಕಿ ಒಂದು ಮಗುವಿಗೆ ಏಳನೇ ತಿಂಗಳಿಗೇ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ವೈದ್ಯರ ಸಲಹೆ ಮೇರೆಗೆ ಎಂಟನೇ ತಿಂಗಳಿಗೇ ಹೆರಿಗೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.

PREV
Read more Articles on

Recommended Stories

ಗುಟ್ಟಾಗಿ ನಟಿ ರಶ್ಮಿಕಾ, ವಿಜಯ್‌ ನಿಶ್ಚಿತಾರ್ಥ?
ನಾಯಿ ನಿಯತ್ತು ಮತ್ತು ಮನುಷ್ಯ ಪ್ರೀತಿ