3 ಮಿಲಿಯನ್‌ಗೂ ಹೆಚ್ಚು ಹಿಟ್ಸ್‌ ಗಳಿಸಿದ ಭೀಮ ಟ್ರೇಲರ್‌

KannadaprabhaNewsNetwork |  
Published : Aug 07, 2024, 01:02 AM IST
ಭೀಮ | Kannada Prabha

ಸಾರಾಂಶ

ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಭೀಮಾ ಚಿತ್ರ ಇದೇ ಆಗಸ್ಟ್ 9ಕ್ಕೆ ತೆರೆಗೆ ಬರುತ್ತಿದ್ದು ಟ್ರೈಲರ್ ಬಿಡುಗಡೆ ಆಗಿದೆ

ಕನ್ನಡಪ್ರಭ ಸಿನಿವಾರ್ತೆ

ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, 3 ಮಿಲಿಯನ್‌ಗೂ ಹೆಚ್ಚು ಹಿಟ್ಸ್‌ ಗಳಿಸಿ ಟ್ರೆಂಡಿಂಗ್‌ನಲ್ಲಿದೆ. ಟ್ರೇಲರ್‌ ಆಸಕ್ತಿ ಹುಟ್ಟಿಸುವಂತೆ ಮೂಡಿ ಬಂದಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಹಾಡುಗಳ ಬಳಿಕ ಟ್ರೇಲರ್‌ ಕೂಡ ಹಿಟ್‌ ಆಗಿದ್ದು, ಸಿನಿಮಾ ಇದೇ ಶುಕ್ರವಾರ ಆಗಸ್ಟ್‌ 9ರಂದು ಬಿಡುಗಡೆ ಆಗುತ್ತಿದೆ.

ಚಿತ್ರದ ಕುರಿತು ದುನಿಯಾ ವಿಜಯ್‌, ‘ಸಿನಿಮಾ ನೋಡುವ ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುವ ಕತೆ ಈ ಚಿತ್ರದಲ್ಲಿದೆ. ಪ್ರತಿಯೊಂದು ಮನೆಯಲ್ಲೂ ಹುಟ್ಟಿಕೊಂಡಿರುವ ಮತ್ತು ಹುಟ್ಟಿಕೊಳ್ಳಬಹುದಾದ ಸಮಸ್ಯೆಯ ಸುತ್ತ ಈ ಸಿನಿಮಾ ಮಾತನಾಡುತ್ತದೆ. ಹೀಗಾಗಿ ಇದು ಎಲ್ಲಾ ವರ್ಗದ ಪ್ರೇಕ್ಷಕರ ಸಿನಿಮಾ’ ಎಂದರು.

ಕೃಷ್ಣಸಾರ್ಥಕ್ ಮತ್ತು ಜಗದೀಶ್‌ ಗೌಡ ಈ ಸಿನಿಮಾ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಯೋಗರಾಜ್‌ ಭಟ್‌, ಆರ್‌ಎಸ್‌ ಗೌಡ, ರಮೇಶ್‌ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ, ತರುಣ್‌ ಸುಧೀರ್‌, ಗುರು ದೇಶಪಾಂಡೆ, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಾಸ್ತಿ, ಕವಿರಾಜ್‌, ಅರಸು ಅಂತಾರೆ ಇದ್ದರು. ನಾಯಕಿ ಅಶ್ವಿನಿ, ಡ್ರ್ಯಾಗನ್ ಮಂಜು, ಸಂಗಿತ ನಿರ್ದೇಶಕ ಚರಣ್‌ರಾಜ್‌ ಸಿನಿಮಾ ಕುರಿತು ಭರವಸೆ ವ್ಯಕ್ತಪಡಿಸಿದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಲಯಾಳಂನ ಸಿನಿಮಾ ನಿರ್ದೇಶಿಸುತ್ತಾರಾ ರಿಷಬ್‌? ಬಿಗ್‌ ಬಜೆಟ್‌ ಪ್ರಾಜೆಕ್ಟ್‌ಗೆ ಮರುಜೀವ
ಪಾಕ್‌ನ ಚಿತ್ರಮಂದಿರದಲ್ಲಿ ಬ್ಯಾನ್‌ ಆಗಿದ್ದ ಧುರಂಧರ್‌, ನೆಟ್‌ಫ್ಲಿಕ್ಸ್‌ ಒಟಿಟೀಲಿ ನಂ.1