ಕನ್ನಡಪ್ರಭ ಸಿನಿವಾರ್ತೆ
ಬಿಗ್‌ಬಾಸ್ ಮನೆಯಲ್ಲಿ ಜಗದೀಶ್ ಆರಂಭದಲ್ಲಿ ರಂಜಿತ್ ಹಾಗೂ ಉಗ್ರಂ ಮಂಜು ಜೊತೆ ಜಗಳಕ್ಕೆ ಇಳಿದಿದ್ದರು. ಈ ಮೂವರ ಜಗಳ ತಾರಕಕ್ಕೇರಿತ್ತು. ಸ್ಪರ್ಧಿಗಳ ಮಿತಿ ಮೀರಿದ ವರ್ತನೆಗೆ ಬಿಗ್ ಬಾಸ್‌ನಿಂದ ವಾರ್ನಿಂಗ್ ಬಂತು. ಆಮೇಲೂ ಸುಮ್ಮನಾಗದ ಜಗದೀಶ್ ಮತ್ತೆ ರಂಜಿತ್ ಜೊತೆ ಜಗಳಕ್ಕಿಳಿದು ಗುದ್ದಾಡಿದ್ದಾರೆ. ಇದು ಪರಸ್ಪರ ಹಲ್ಲೆ ಮಾಡುವವರೆಗೂ ಹೋಗಿ ಇಬ್ಬರೂ ಈ ಸಂದರ್ಭ ಹೊಡೆದಾಡಿಕೊಂಡಿದ್ದು, ನಿಯಮ ಉಲ್ಲಂಘನೆಯ ಕಾರಣಕ್ಕೆ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ. ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲಿ ಜಗಳ ಆಡಿಕೊಂಡು ಮನೆಯಿಂದ ಸ್ಪರ್ಧಿಗಳು ಹೊರಬಿದ್ದ ಎರಡನೇ ಪ್ರಕರಣ ಇದಾಗಿದೆ. ಆದರೆ ಮೂರನೇ ವಾರಕ್ಕೇ ಈ ಮಟ್ಟಿನ ಘರ್ಷಣೆ ನಡೆದಿರುವುದು ಇದೇ ಮೊದಲು. ಈ ಹಿಂದೆ ಹುಚ್ಚ ವೆಂಕಟ್ ಸಹ ಹೊಡೆದಾಡಿಕೊಂಡು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು.
ಈ ಸಲದ ಬಿಗ್‌ಬಾಸ್ ಹಲವು ವಿವಾದಗಳಿಗೆ ತುತ್ತಾಗಿದೆ. ಇದೇ ಕೊನೆಯ ಸೀಸನ್ ಎಂದು ಸುದೀಪ್ ಘೋಷಿಸಿದ್ದಾರೆ. ಮಹಿಳಾ ಆಯೋಗ ಬಿಗ್‌ಬಾಸ್ ವಿರುದ್ಧ ಪ್ರಕರಣ ದಾಖಲಿಸಿದೆ.