‘ಬಿಹೈಂಡ್‌ ದಿ ಸೀನ್ಸ್‌’ ಈ ಕಾಲದ ಐವರು ಯುವ ನಿರ್ದೇಶಕರ ಐದು ಹೊಸ ಜಗತ್ತುಗಳನ್ನು ಕಾಣಿಸುವ ಸಿನಿಮಾ

KannadaprabhaNewsNetwork |  
Published : Nov 09, 2024, 01:01 AM ISTUpdated : Nov 09, 2024, 05:02 AM IST
ಎಎ | Kannada Prabha

ಸಾರಾಂಶ

ಬಿಟಿಎಸ್‌ ಸಿನಿಮಾ ರಿವ್ಯೂ

ಬಿಟಿಎಸ್‌

ತಾರಾಗಣ: ಜಹಾಂಗೀರ್, ಶ್ರೀಪ್ರಿಯಾ, ಮಹಾದೇವ ಪ್ರಸಾದ್‌, ಮೇದಿನಿ ಕೆಳಮನೆ, ವಿಜಯಕೃಷ್ಣ, ಕೌಶಿಕ್‌,

ನಿರ್ದೇಶನ: ಪ್ರಜ್ವಲ್‌ ಎಂ ಆರ್‌, ಸಾಯಿ ಶ್ರೀನಿಧಿ, ಕುಲದೀಪ್‌ ಕರಿಯಪ್ಪ, ರಾಜೇಶ್‌ ಶಂಕದ್‌, ಅಪೂರ್ವ ಭಾರದ್ವಾಜ್‌

ರೇಟಿಂಗ್‌: 3

- ಪ್ರಿಯಾ ಕೆರ್ವಾಶೆ

‘ಬಿಹೈಂಡ್‌ ದಿ ಸೀನ್ಸ್‌’ ಈ ಕಾಲದ ಐವರು ಯುವ ನಿರ್ದೇಶಕರ ಐದು ಹೊಸ ಜಗತ್ತುಗಳನ್ನು ಕಾಣಿಸುವ ಸಿನಿಮಾ. ಕಮರ್ಷಿಯಲ್‌, ಬ್ಯುಸಿನೆಸ್‌ಗಳನ್ನೆಲ್ಲ ಸೈಡಿಗಿಟ್ಟು, ಸ್ವಚ್ಛವಾದ ಕಥೆ ಹೇಳುವ ತುಡಿತ ಈ ಚಿತ್ರಗಳಲ್ಲಿ ಎದ್ದು ಕಾಣುತ್ತದೆ.

ಮೊದಲ ಕಥೆ ‘ಬಾನಿಗೊಂದು ಎಲ್ಲೆ ಎಲ್ಲಿದೆ?’ ಅಪ್ಪ ಮತ್ತು ಮಗ ಎಂಬ ಎರಡು ಕಾಲಘಟ್ಟಗಳನ್ನು ಎದರಾಎದುರು ನಿಲ್ಲಿಸುವ ಕಥೆ. ಇದರ ದೀರ್ಘ ದೃಶ್ಯಗಳು ಕಲಾತ್ಮಕ ಸಿನಿಮಾ ಶೈಲಿಯನ್ನು ನೆನಪಿಸುತ್ತದೆ. ಈ ಕಥೆಯನ್ನು ಇನ್ನಷ್ಟು ಹರಿತವಾಗಿಸುವ ಸಾಧ್ಯತೆ ಇತ್ತು.

ಎರಡನೇ ಕಥೆ ಸಾಯಿ ಶ್ರೀನಿಧಿ ಅವರ ‘ಕಾಫಿ ಸಿಗರೆಟ್‌ ಆ್ಯಂಡ್‌ ಲೈನ್ಸ್‌’ ಚುರುಕುತನ, ಭಿನ್ನ ವಿನ್ಯಾಸ, ಹೊಸ ಥಾಟ್‌ಗಳ ಮೂಲಕ ಗಮನಸೆಳೆಯುತ್ತದೆ. ಇದರಲ್ಲಿ ಕಥೆಯೊಳಗೇ ಕಥೆಗಳಿವೆ. ಒಂದು ಕಥೆ ಬಹಳ ತೀವ್ರವಾಗಿ ಹೆಣ್ಣಿನ ಎರಡು ದೃಷ್ಟಿಕೋನಗಳನ್ನು ಕಟ್ಟಿಕೊಡುತ್ತದೆ. ಉಳಿದವು ಲೈಟ್‌ ಹ್ಯೂಮರ್‌ನಿಂದ ಉಲ್ಲಾಸ ತರುವಂತಿವೆ. ಕುಲದೀಪ್ ಕರಿಯಪ್ಪ ಅವರ ‘ಹೀರೋ’ ಹಾಗೂ ರಾಜೇಶ್‌ ಶಂಕದ್‌ ಅವರ ‘ಬ್ಲಾಕ್‌ಬಸ್ಟರ್‌’ ಅಸಂಗತ ಕಥಾಹಂದರ ಹೊಂದಿರುವಂಥವು. ‘ಬ್ಲಾಕ್‌ಬಸ್ಟರ್‌’ ಕಥೆಯ ಥಾಟ್‌ ಕನ್ನಡದ ಮಟ್ಟಿಗೆ ಹೊಸತು. ಇದು ಸಿನಿಮೋತ್ಸವದ ಸಿನಿಮಾಗಳನ್ನು ನೆನಪಿಸಿದರೆ ಅಚ್ಚರಿಯಿಲ್ಲ.

ಕೊನೆಯ ‘ಸುಮೋಹ’ ಕಥೆ ಎಮೋಶನಲ್‌ ಆಗಿ ಎಲ್ಲರಿಗೂ ಕನೆಕ್ಟ್‌ ಆಗುವಂಥಾದ್ದು. ಇದರಲ್ಲಿ ಟಚ್‌ಅಪ್‌ ಬಾಯ್‌ ಒಬ್ಬನ ಬದುಕಿನ ಕ್ಲೋಸಪ್‌ ಇದೆ. ಈ ಕಥೆ ಎಷ್ಟು ಸಂವೇದನಾಶೀಲವಾಗಿದೆಯೋ, ಅದನ್ನು ಕನ್ವೇ ಮಾಡುವಲ್ಲಿ ಮಹಾದೇವ ಪ್ರಸಾದ್‌ ಹಾಗೂ ಶ್ರೀಪ್ರಿಯಾ ಅವರ ನಟನೆಯೂ ಅಷ್ಟೇ ತೀವ್ರವಾಗಿದೆ. ಸಿನಿಮಾ ಮುಗಿಸಿ ಹೊರಟವರ ಕಿವಿಯಲ್ಲಿ, ‘ಮೋನಿ..’ ಎಂಬ ಸಂತೈಸುವ ದನಿ ಬಹಳ ಹೊತ್ತು ಅನುರಣಿಸುತ್ತಲೇ ಇರುತ್ತದೆ.

ಪ್ರತೀ ಕಥಾ ಪ್ರಸಂಗದಲ್ಲೂ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ ರೀತಿ, ಅದರ ಹಿಂದಿರುವ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಸಹಜತೆಯಿಂದ ತೀವ್ರತೆಯಿಂದ ಹೊಸ ಪ್ರಯತ್ನವಾಗಿ ಗಮನಸೆಳೆಯುವ ಸಿನಿಮಾ ‘ಬಿಟಿಎಸ್‌’.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2025ರ ಕನ್ನಡ ಚಿತ್ರರಂಗದ ಸಕ್ಸಸ್‌ ರೇಟ್‌ 0.78%-ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ
ಸೆನ್ಸಾರ್‌ನಲ್ಲಿ ಇಯರ್‌ ಎಂಡ್‌ ರಶ್‌ - ಇಬ್ಬರು ಅಧಿಕಾರಿಗಳ ನಿಯೋಜನೆಗೆ ಮನವಿ