- ಚೈತ್ರಾ ಆಚಾರ್
ಆ ಹೊತ್ತಿಗೆ ನನ್ನ ಕಣ್ಣಿಗೆ ಬಿದ್ದವನು ನನ್ನ ಸೀನಿಯರ್. ಬಹಳ ಹ್ಯಾಂಡ್‌ಸಮ್ ಹುಡುಗ. ನೋಡೋದಕ್ಕೆ ಸಖತ್ತಾಗಿದ್ದ. ನನಗೆ ಅವನ ಮೇಲೆ ಒಂಥರಾ ಕ್ರಶ್. ಆದರೆ ಇದು ಬಹಳ ದಿನ ಮುಂದುವರಿಯಲಿಲ್ಲ. ನನಗೆ ಏನನ್ನೂ ಮನಸ್ಸಲ್ಲೇ ಇಟ್ಟುಕೊಳ್ಳೋದಕ್ಕೆ ಬರೋದಿಲ್ಲ. ಒಂದು ದಿನ ಅವನ ಬಳಿ ನಂಗೆ ಅವನ ಬಗ್ಗೆ ಕ್ರಶ್ ಆಗಿರೋದನ್ನು ಹೇಳಿಕೊಂಡೆ. ಅವನು ಅದನ್ನೆಲ್ಲ ಸೀರಿಯಸ್ಸಾಗಿ ತಗೊಳ್ಳಲಿಲ್ಲ. ‘ಹೋಗಮ್ಮಾ, ಅದೆಲ್ಲಾ ಏನು?’ ಅನ್ನೋ ಧಾಟಿಯಲ್ಲಿ ಮಾತಾಡಿಬಿಟ್ಟ. ನಂಗೆ ಏನೇನೋ ಆಯ್ತು. ಆಮೇಲೆ ಹಿಂದಿದ್ದ ಕ್ರಶ್ ಗಿಶ್ ಎಲ್ಲ ಹೋಗಿ ನಾವಿಬ್ಬರೂ ಒಳ್ಳೆ ಸ್ನೇಹಿತರಾದೆವು. ಈಗಲೂ ನಾವು ಒಳ್ಳೆಯ ಫ್ರೆಂಡ್ಸ್. ಆಮೇಲಿಂದ ಯಾರ ಜೊತೆಗೂ ಲವ್ವಲ್ಲಿ ಬಿದ್ದಿಲ್ಲ. ಅದಕ್ಕೆ ಸಮಯವೂ ನಂಗಿಲ್ಲ. ಆದರೆ ತಮಿಳು ನಟ ಸೂರ್ಯ ನನ್ನ ಯಾವತ್ತಿನ ಕ್ರಶ್. ಅವರ ಆ್ಯಕ್ಟಿಂಗ್, ಲುಕ್ ಎಲ್ಲವೂ ನಂಗಿಷ್ಟ.