ನವರಸ ನಾಯಕ ಜಗ್ಗೇಶ್‌ ಅವರ ಅಭಿನಯದಲ್ಲಿ ‘ಭರತ’ ಹೆಸರಿನ ಹೊಸ ಸಿನಿಮಾ ಘೋಷಣೆಯಾಗಿದೆ. ಇದಕ್ಕಿಂತ ಮತ್ತೊಂದು ವಿಶೇಷ ಎಂದರೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಜಗ್ಗೇಶ್‌ ಅವರ ಮಕ್ಕಳಾದ ಗುರುರಾಜ್‌ ಹಾಗೂ ಯತಿರಾಜ್‌.

ಸಿನಿವಾರ್ತೆ

ನವರಸ ನಾಯಕ ಜಗ್ಗೇಶ್‌ ಅವರ ಅಭಿನಯದಲ್ಲಿ ‘ಭರತ’ ಹೆಸರಿನ ಹೊಸ ಸಿನಿಮಾ ಘೋಷಣೆಯಾಗಿದೆ. ಇದಕ್ಕಿಂತ ಮತ್ತೊಂದು ವಿಶೇಷ ಎಂದರೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಜಗ್ಗೇಶ್‌ ಅವರ ಮಕ್ಕಳಾದ ಗುರುರಾಜ್‌ ಹಾಗೂ ಯತಿರಾಜ್‌. ಮತ್ತೊಂದು ಹೈಲೈಟ್‌ ಎಂದರೆ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವ ಗುರುರಾಜ್‌ ಹಾಗೂ ಯತಿರಾಜ್‌ ಅವರು ರಾಜ್‌ ಬ್ರದರ್ಸ್‌ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಈಗಷ್ಟೆ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಸಂಕ್ರಾಂತಿ ಹಬ್ಬದಂದು ಚಿತ್ರೀಕರಣಕ್ಕೆ ಚಾಲನೆ

ಸಂಕ್ರಾಂತಿ ಹಬ್ಬದಂದು ಚಿತ್ರೀಕರಣಕ್ಕೆ ಚಾಲನೆ ನೀಡಲಾಗುವುದು. ಅಜನೀಶ್‌ ಲೋಕನಾಥ್‌ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ರಿಚ್ಚ ಫಿಲಮ್ಸ್‌ ಫ್ಯಾಕ್ಟ್ರಿ ಮೂಲಕ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಉತ್ತಮ ಕಥೆ ಆಯ್ಕೆ

ಗುರುರಾಜ್‌ ಹಾಗೂ ಯತಿರಾಜ್‌ ಉತ್ತಮ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು, ಅದನ್ನು ಸಿನಿಮಾ ರೂಪಕ್ಕೆ ತರುವ ಸಿದ್ಧತೆಯನ್ನು ಬಹಳ ದಿನಗಳಿಂದ ನಡೆಸಿದ್ದರು. ಸಂಪೂರ್ಣವಾಗಿ ಕತೆಯ ಬರವಣಿಗೆ ಮುಗಿಸುವವರೆಗೂ ಜಗ್ಗೇಶ್‌ ಅವರಿಗೂ ತಿಳಿಸದೆ ಗೌಪ್ಯವಾಗಿಟ್ಟಿದ್ದರು. ಈಗ ಕತೆ ಕೇಳಿ ತಮ್ಮ ಇಬ್ಬರ ಮಕ್ಕಳಿಗೆ ಪ್ರೋತ್ಸಾಹಿಸಲು ಹೀರೋ ಆಗುತ್ತಿದ್ದಾರೆ ಜಗ್ಗೇಶ್‌ ಅವರು. ಎಲ್ಲಾ ವಯೋಮಾನದ ಪ್ರೇಕ್ಷಕರು ಕುಟುಂಬ ಸಮೇತ ಕುಳಿತು ನೋಡುವಂಥ ಮನರಂಜನಾತ್ಮಕ ಸಿನಿಮಾ ಇದು. ನಗುವಿನ ಜೊತೆಗೆ ಉತ್ತಮ ಸಂದೇಶವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.